ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಪಂದ್ಯಾಟ

ಮಂಗಳೂರು: ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ನಾಲ್ಕು ದಿನಗಳ ಚೆಸ್ ಪಂದ್ಯಾಟ ನಗರದ ಪುರಭವನದಲ್ಲಿ ಶನಿವಾರ ಆರಂಭಗೊಂಡಿತು.
ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಎಂಆರ್‌ಪಿಎಲ್ ಚೀಫ್ ಜನರಲ್ ಮ್ಯಾನೇಜರ್ ಸಂದೀಪ್ ಕುಟಿನ್ಹೋ ಚೆಸ್ ಪಂದ್ಯದ ಮೂಲಕ ಯೋಚನಾ ಶಕ್ತಿಯನ್ನು ಹೆಚ್ಚಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು, ಆಂತರಿಕವಾಗಿಯೂ ಹೆಚ್ಚು ಬಲಗೊಳ್ಳಬೇಕು ಎಂದರು.
ದ.ಕ. ಜಿಲ್ಲಾ ಚೆಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಸುನೀಲ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ದ.ಕ. ಜಿಲ್ಲಾ ಯುವಜನ ಸೇವಾ ನಿರ್ದೇಶಕ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು. ದ.ಕ ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ, ಸಲಹಾ ಸಮಿತಿ ಸದಸ್ಯರಾದ ಅಮರಶ್ರೀ ಶೆಟ್ಟಿ, ನ್ಯಾಯವಾದಿ ನಾರಾಯಣ್ ಎಲ್. ಹಾಗೂ ಚೆಸ್ ಅಸೋಸಿಯೇಶನ್ ಪದಾಧಿಕಾರಿಗಳಾದ ಉಪಾಧ್ಯಕ್ಷೆ ವಾಣಿ ಎಸ್. ಪಣಿಕ್ಕರ್, ಕಾರ್ಯದರ್ಶಿ ಅಭಿಷೇಕ್ ಕಟ್ಟೇಮಾರ್, ಜತೆ ಕಾರ್ಯದರ್ಶಿ ಸತ್ಯಪ್ರಸಾದ್, ಖಜಾಂಚಿ ರಮ್ಯಾ ಎಸ್. ರೈ, ಖಜಾಂಚಿ ಪೂರ್ಣಿಮ ಆಳ್ವ, ಉಪಾಧ್ಯಕ್ಷ ವಿ.ಪಿ. ಆಶೀರ್ವಾದ್ ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ 285 ಚೆಸ್ ಆಟಗಾರರು ಭಾಗವಹಿಸುತ್ತಿದ್ದಾರೆ. ಕರ್ನಾಟಕ, ಕೇರಳ, ಗೋವಾ, ತಮಿಳುನಾಡು, ಒಡಿಶಾ, ಆಂಧ್ರ ಪ್ರದೇಶ, ಮೇಘಾಲಯ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ದೇಶದ ವಿವಿಧೆಡೆಯಿಂದ ಆಟಗಾರರು ಆಗಮಿಸಿದ್ದಾರೆ. ೮ ಸುತ್ತುಗಳಲ್ಲಿ ನಡೆಯುವ ಚೆಸ್ ಪಂದ್ಯಾಟ ಮೇ ೬ ರಂದು ಕೊನೆಗೊಳ್ಳಲಿದೆ.