ಕಾರ್ಮಿಕ ದಿನಾಚರಣೆಯ ಅಂಗವಾಗಿ ಕೆ.ಸಿ.ಎಫ್. ಬಹರೈನ್‌ನಿಂದ ಸ್ವಚ್ಛತಾ ಅಭಿಯಾನ

ಬಹರೈನ್: ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಕಾರ್ಮಿಕ ದಿನಾಚರಣೆಯ ಅಂಗವಾಗಿ ಸ್ವಚ್ಛತಾ ಅಭಿಯಾನವು ಮುಹರ‌್ರಕ್ ಗವರ್ನರ್ ಸಲ್ಮಾನ್ ಬಿನ್ ಈಶಾ ಬಿನ್ ಹಿಂದಿ ಅಲ್ ಮನ್ನಾಯಿ ಅವರ ಸಹಯೋಗದಲ್ಲಿ ಗೌಸ್ ಕೊರ್ನೀಚ್ ಸಮುದ್ರ ತೀರದಲ್ಲಿ ಇತ್ತೀಚೆಗೆ ನಡೆಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಹನೀಫ್ ಉಸ್ತಾದ್ ದುಆ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅತಿಥಿಯಾಗಿ ಕೆಎಂಸಿಸಿ ನಾಯಕ ಶಾಫಿ ಪಾರಕಟ್ಟೆ ಭಾಗವಹಿಸಿದ್ದರು. ಮುಹರ‌್ರಕ್ ಗವರ್ನರ್ ಕಾರ್ಯದರ್ಶಿ ಹಾಮದ್, ಹಿಲಾಲ್ ಹಾಸ್ಪಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ಜೀಜೊ ಉಪಸ್ಥಿತರಿದ್ದರು.
ಕೆಸಿಎಫ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುಹಾಝ್ ಉಜಿರೆ, ಸಾಂತ್ವನ ವಿಭಾಗದ ಅಧ್ಯಕ್ಷ ರಝಾಕ್ ಆನೆಕಲ್, ಕಾರ್ಯದರ್ಶಿ ಅಶ್ರಫ್ ಕಿನ್ಯ, ಸಂಘಟನಾ ವಿಭಾಗದ ಅಧ್ಯಕ್ಷ ಮನ್ಸೂರ್ ಬೆಳ್ಮ, ಕಾರ್ಯದರ್ಶಿ ಸೂಫಿ ಪೈಂಬಚ್ಚಾಲ್, ಇಹ್ಸಾನ್ ವಿಭಾಗದ ಅಧ್ಯಕ್ಷ ನಝೀರ್ ಹಾಜಿ ದೇರಳಕಟ್ಟೆ, ಕಾರ್ಯ ದರ್ಶಿ ಮಜೀದ್ ಝುಹ್ರಿ, ಶಿಕ್ಷಣ ವಿಭಾಗದ ಅಧ್ಯಕ್ಷ ಸುಹೈಲ್ ಬಿ.ಸಿ. ರೋಡ್, ಕಾರ್ಯದರ್ಶಿ ಅಶ್ರಫ್ ರೆಂಜಾಡಿ, ಆಡಳಿತ ವಿಭಾಗದ ಅಧ್ಯಕ್ಷ ಮೂಸಾ ಪೈಂಬಚ್ಚಾಲ್, ಕಾರ್ಯದರ್ಶಿ ಸಿದ್ದೀಕ್ ಎಣ್ಮೂರು, ಪಬ್ಲಿಕೇಶನ್ ಕಾರ್ಯದರ್ಶಿ ಫಝಲ್ ಸುರತ್ಕಲ್, ಕೆಸಿಎಫ್ ಐಸಿ ಶಿಕ್ಷಣ ವಿಭಾಗದ ಕಾರ್ಯದರ್ಶಿ ಖಲಂದರ್ ಉಸ್ತಾದ್, ವೃತ್ತಿಪರ ವಿಭಾಗದ ಅಧ್ಯಕ್ಷ ಲತೀಫ್ ಪೆರೋಲಿ, ಕಾರ್ಯದರ್ಶಿ ತೌಫೀಕ್ ಬೆಳ್ತಂಗಡಿ ಮತ್ತಿತರರು ಭಾಗವಹಿಸಿದ್ದರು.







