ದರ್ಗಾಗಳ ಬಗ್ಗೆ ವಿಶ್ವಾಸ, ಗೌರವ ಇರಬೇಕು: ಅಹ್ಮದ್ ಸಖಾಫಿ ಕಾಶಿಪಟ್ನ

ಉಳ್ಳಾಲ: ದರ್ಗಾ ಗಳು ಅಲ್ಲಾಹನ ಅನುಗ್ರಹ ಕೇಂದ್ರಗಳಾಗಿದ್ದು, ದರ್ಗಾ ಝಿಯಾರತ್ ಮಾಡುವವನಿಗೆ ಅಲ್ಲಾಹನ ಅನುಗ್ರಹ ಲಭಿಸುತ್ತದೆ. ದರ್ಗಾಗಳು ಲೋಕದ ವಿವಿಧ ಕಡೆಗಳಲ್ಲಿ ಕಾಣ ಸಿಗುತ್ತದೆ. ಈ ದರ್ಗಾ ಗಳ ಪೈಕಿ ಮಾದರಿ ದರ್ಗಾಗಳ ಪಟ್ಟಿಯಲ್ಲಿ ಉಳ್ಳಾಲ ದರ್ಗಾ ಸೇರಿದೆ ಎಂದು ಅಹ್ಮದ್ ಸಖಾಫಿ ಕಾಶಿಪಟ್ನ ಹೇಳಿದರು.
ಅವರು ಉಳ್ಳಾಲ ದರ್ಗಾ ದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ಸೋಮವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ದರ್ಗಾಕ್ಕೆ ವಿವಿಧ ಕಡೆಗಳಿಂದ ಭಕ್ತಾದಿಗಳು ಬಂದು ಝಿಯಾರತ್ ಮಾಡುತ್ತಾರೆ. ಇದು ಭಕ್ತಾದಿಗಳು ದರ್ಗಾಕ್ಕೆ ಕೊಡುವ ಗೌರವ ಆಗಿದೆ ಎಂದು ಹೇಳಿದರು.
ಪ್ರವಾದಿಯವರ ಕಾಲದಲ್ಲಿ ಇಸ್ಲಾಮ್ ಧರ್ಮದ ಪ್ರಚಾರಕ್ಕಾಗಿ ಭಾರತಕ್ಕೆ ಕೆಲವು ಪಂಡಿತರು ಆಗಮಿಸಿ ದ್ದರು. ಅವರ ದರ್ಗಾ ಗಳು ಕೆಲವು ಕಡೆ ಕಾರ್ಯಾಚರಿಸುತ್ತಿದೆ. ಈ ದರ್ಗಾಗಳ ಬಗೆ ನಮಗೆ ವಿಶ್ವಾಸ, ಗೌರವ ಇರಬೇಕು ಎಂದು ಕರೆ ನೀಡಿದರು.
ಅಲವಿ ಸಖಾಫಿ ಕೊಳತ್ತೂರ್ ಧಾರ್ಮಿಕ ಪ್ರವಚನ ನೀಡಿದರು. ಪೆರ್ನೆ ಅಬ್ಬಾಸ್ ಸಅದಿ ಉಸ್ತಾದ್ ದುಆ ನೆರವೇರಿಸಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಂಪಲ ಜುಮಾ ಮಸೀದಿ ಅಧ್ಯಕ್ಷ ಇಕ್ಬಾಲ್ ಹಾಜಿ, ಖತೀಬ್ ಅಬ್ದುಲ್ ರಹ್ಮಾನ್ ಅಹ್ಸನಿ,ಪಟ್ಲ ತಖ್ವಾ ಜುಮಾ ಮಸೀದಿ ಅಧ್ಯಕ್ಷ ಪಿ.ಎಚ್.ಮಹ್ಮೂದ್ ಹಾಜಿ, ಉಳ್ಳಾಲ ಬೈಲ್ ಮಸೀದಿ ಅಧ್ಯಕ್ಷ ಅಮೀರ್ ಅಲಿ, ಕಾರ್ಯದರ್ಶಿ ಬಶೀರ್, ಪಿಲಾರ್ ಮಸೀದಿ ಖತೀಬ್ ಜಬ್ಬಾರ್ ಸಖಾಫಿ,ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಪಿಲಾರ್,ಸದಸ್ಯ ಝೈನುದ್ದೀನ್ ಮೇಲಂಗಡಿ, ಮೊಯ್ದಿನ್ ಪಟ್ಲ, ಅಬೂಬಕ್ಕರ್ ಹೈದರಲಿ ನಗರ,ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.







