ಕುಟುಂಬ ಸ್ನೇಹ ನಮ್ಮಲ್ಲಿ ಇರಬೇಕು: ಅಬ್ದುಲ್ ರಶೀದ್ ಮದನಿ

ಉಳ್ಳಾಲ: ಮನುಷ್ಯನ ಮುಂಭಾಗದಲ್ಲಿ ಹಲವು ಸವಾಲು ಗಳಿರುತ್ತವೆ. ಅದನ್ನು ಮೆಟ್ಟಿ ನಿಲ್ಲುವ ತಾಕತ್ತು ನಮಲ್ಲಿರಬೇಕು. ಧರ್ಮ, ಆರಾಧನೆ ಜೊತೆಗೆ ಕುಟುಂಬ ಸ್ನೇಹ ನಮ್ಮಲ್ಲಿ ಇರಬೇಕು ಎಂದು ಅಬ್ದುಲ್ ರಶೀದ್ ಮದನಿ ಹೇಳಿದರು.
ಅವರು ಉಳ್ಳಾಲ ದರ್ಗಾದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ಬುಧವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಇಸ್ಲಾಮಿನ ತತ್ವಾದರ್ಶಗಳ ಪಾಲನೆ ಅಗತ್ಯ.ಪರಸ್ಪರ ದ್ವೇಷದ ಬದುಕು ನಾವು ಇಷ್ಟಪಡಬಾರದು. ಜೀವನ ಇಸ್ಲಾಮಿನ ಚೌಕಟ್ಟು ಮೀರಬಾರದು ಎಂದು ಕರೆ ನೀಡಿದರು.
ಸಿ . ಮುಹಮ್ಮದ್ ಫೈಝಿ ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ಉತ್ತಮ ಕಾರ್ಯ ಆಯೋಜಿಸ ಬೇಕು. ಮಾನವ ಅಭಿವೃದ್ಧಿಗೆ ಪೂರಕವಾದ ಕಾರ್ಯ ಚಟುವಟಿಕೆ ನಾವು ಮಾಡಬೇಕು. ಅಭಿವೃದ್ಧಿ ನಮ್ಮ ಗುರಿ ಆಗಬೇಕು ಎಂದು ಕರೆ ನೀಡಿದರು.
ಬಶೀರ್ ಮದನಿ ನೀಲಗಿರಿ ಧಾರ್ಮಿಕ ಪ್ರವಚನ ನೀಡಿದರು. ಅಬ್ದುಲ್ ಮಜೀದ್ ಫೈಝಿ ಪೊಯ್ಯತ್ತ ಬೈಲ್ ದುಆ ನೆರವೇರಿಸಿದರು.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್ಊದ್ ತಂಙಳ್, ಕುಂಪಲ ಜುಮಾ ಮಸೀದಿ ಅಧ್ಯಕ್ಷ ಇಕ್ಬಾಲ್, ಖತೀಬ್ ಅಬ್ದುಲ್ ರಹ್ಮಾನ್ ಅಹ್ಸನಿ, ಚೊಂಬು ಗುಡ್ಡೆ ಜುಮಾ ಮಸೀದಿ ಅಧ್ಯಕ್ಷ ಪಿ.ಸಿ. ಇಮ್ತಿಯಾಝ್ ಖತೀಬ್ ಮುದ್ರಿಕ ಮದನಿ,ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಝೈನುದ್ದೀನ್ ಮೇಲಂಗಡಿ, ಅಬ್ದುಲ್ ಖಾದರ್ ಕೋಡಿ, ಇಮ್ತಿಯಾಝ್,ಮೊಯ್ದಿನ್ ಪಟ್ಲ, ಅಬೂಬಕ್ಕರ್ ಹೈದರಲಿ ನಗರ,ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್ , ಹಝ್ರತ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಸೂಲ್ ಖಾನ್, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಇಮ್ತಿಯಾಝ್ ಪಿ.ಬಿ.,ದೈಹಿಕ ಶಿಕ್ಷಕ ಖಾಲೀದ್, ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.







