ಭಾರತೀಯ ಸೇನೆಯ ಕಾರ್ಯಾಚರಣೆಗೆ ಮುಹಮ್ಮದ್ ಮಸೂದ್ ಶ್ಲಾಘನೆ

ಮಂಗಳೂರು, ಮೇ ೮: ಜಮ್ಮು-ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತದ ಸೇನೆಯು ಬುಧವಾರ ನಸುಕಿನ ಜಾವ ಪಾಕಿಸ್ತಾನ ಹಾಗೂ ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ಗುರಿಯಾಗಿಸಿ ನಡೆಸಿದ ದಾಳಿ, ಕಾರ್ಯಾಚರಣೆಗೆ ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಶ್ಲಾಘಿಸಿದ್ದಾರೆ.
ಭಾರತದ ಸೇನೆ ಹಾಗೂ ಭಾರತ ಸರಕಾರದೊಂದಿಗೆ ಮುಸ್ಲಿಂ ಸಮುದಾಯವು ಸದಾ ನಿಲ್ಲುತ್ತದೆ ಎಂದು ಮುಹಮ್ಮದ್ ಮಸೂದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story