ಸುರತ್ಕಲ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವಾರ್ಷಿಕ ಮಹಾ ಸಭೆ: ಪದಾಧಿಕಾರಿಗಳ ಆಯ್ಕೆ

ಸುರತ್ಕಲ್: ಸುರತ್ಕಲ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ವಾರ್ಷಿಕ ಮಹಾಸಭೆಯು ಮೇ 5ರಂದು ಕಾರ್ನಾಡು ದಾರುಲ್ ಉಲೂಮ್ ಮದ್ರಸದಲ್ಲಿ ಮುಫತ್ತಿಶ್ ಉಮರ್ ದಾರಿಮಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.
ಶೈಖುನ ಬೊಳ್ಳೂರು ಉಸ್ತಾದರ ಪ್ರಾರ್ಥನೆ ನೆರವೇರಿಸಿದರು. ಸದರ್ ಉಸ್ತಾದ್ ನಾಸಿರ್ ಮುಸ್ಲಿಯಾರ್ ಖಿರಾಅತ್ ಪಠಿಸಿದರು. ಸ್ಥಳೀಯ ಮುದರ್ರಿಸ್ ಶರೀಫ್ ಅರ್ಷಾದಿ ಸಭೆಯನ್ನು ಉದ್ಘಾಟಿಸಿದರು.
ಮುದರ್ರಿಸ್ ರಿಯಾಝ್ ರಹ್ಮನಿ ತದ್ರಿಬ್ ನ ಮಹತ್ವದ ಕುರಿತು ವಿಷಯ ಮಂಡಿಸಿದರು. ಸದರ್ ಉಸ್ತಾದರ ಸಂಗಮ ನಡೆಯಿತು. ಇದೇ ಸಂದರ್ಭ 2025 - 26ನೇ ವರ್ಷದ ಪದ್ಧತಿಯ ಕುರಿತು ಚರ್ಚೆ ನಡೆಸಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಝಕ್ ಮದನಿ ಕಾರ್ನಾಡು, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ದಾರಿಮಿ ಚೊಕ್ಕ ಬೆಟ್ಟು, ರಿಯಾಝ್ ಫೈಝಿ ಕಾರ್ನಾಡ್, ಪ್ರಧಾನ ಕಾರ್ಯದರ್ಶಿಯಾಗಿ ತ್ವಯ್ಯಿಬ್ ಫೈಝಿ ಬೊಳ್ಳೂರು, ಜೊತೆ ಕಾರ್ಯದರ್ಶಿ ಇಮ್ರಾನ್ ಮಖ್ದೂಮಿ ಇಂದಿರಾನಗರ, ಬಿಶ್ರ್ ಯಾಮಾನಿ ಕರಾಯ, ಕೋಶಾಧಿಕಾರಿಯಾಗಿ ಎಂ.ಇ. ಮುಹಮ್ಮದ್ ಹನೀಫ್ ಕೊಲ್ನಾಡ್ ಆಯ್ಕೆಯಾದರು.
ಪರೀಕ್ಷೆ ಬೋರ್ಡ್ ಚೇರ್ಮ್ಯಾನ್ಆಗಿ ಅಬ್ದುಲ್ ರಶೀದ್ ಮುಸ್ಲಿಯಾರ್ ಸಂತಕಟ್ಟೆ, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಮದನಿ ಸಂತಕಟ್ಟೆ, ಅಬ್ದುಲ್ ನಾಸಿರ್ ಮುಸ್ಲಿಯಾರ್ ಬೊಳ್ಳೂರು, ಎಸ್ಕೆಎಸ್ಬಿವಿ ಚೇರ್ಮ್ಯಾನ್ಆಗಿ ರಶೀಕುದ್ದಿನ್ ಅನ್ಸಾರಿ ಚೊಕ್ಕಬೆಟ್ಟು, ಕನ್ವಿನೇರ್ ಆಗಿ ಜಲಾಲುದ್ದೀನ್ ಯಮಾನಿ, ಕೋಟ ಉಸ್ತಾದ್ ರಿಲೀಫ್ ಚೇರ್ಮ್ಯಾನ್ ಆಗಿ ಇಮ್ರಾನ್ ದಾರಿಮಿ ಕೊಲ್ನಾಡ್, ರಿಯಾಝ್ ಫೈಝಿ ಕೊಯ್ಕುಡೆ, ಮೀಡಿಯಾ ಕೋ ಆರ್ಡಿನೇಟರ್ ಆಗಿ ಆಶೀಕ್ ಮುಸ್ಲಿಯಾರ್ ಕಾರ್ನಾಡ್, ಕುರುನ್ನುಗಳ್ ಕೋ ಆರ್ಡಿನೇಟರ್ ಆಗಿ ಅಶ್ರಫ್ ಅಝ್ ಹರಿ ಕಾರ್ನಾಡ್ ಅವರು ಆಯ್ಕೆಯಾದರು. ರೇಂಜ್ ಕಾರ್ಯ ದರ್ಶಿ ರಝಕ್ ಮದನಿ ಸ್ವಾಗತಿಸಿದರು. ತ್ವಯ್ಯಿಬ್ ಫೈಝಿ ವಂದಿಸಿದರರು ಎಂದು ಸುರತ್ಕಲ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ನ ಪ್ರಕಟಣೆಯಲ್ಲಿ ತಿಳಿಸಿದೆ.







