ನಮಾಝ್‌ಗೆ ಮಹತ್ವ ನೀಡಬೇಕು: ಅಲವಿ ಕುಟ್ಟಿ ಸಖಾಫಿ

ಉಳ್ಳಾಲ: ಮಾನವ ತನ್ನ ದೇಹದ ಮೂಲಕ ನಿರ್ವಹಿಸುವ ಪ್ರಾರ್ಥನೆ ನಮಾಝ್ ಆಗಿರುತ್ತದೆ. ಈ ನಮಾಝ್ ಪ್ರವಾದಿಯವರ ಕಾಲದಿಂದಲೇ ನಡೆದುಕೊಂಡು ಬಂದಿರುವ ಪ್ರಾರ್ಥನೆ. ಇದಕ್ಕೆ ನಾವು ಮಹತ್ವ ನೀಡಬೇಕು ಎಂದು ಅಲವಿ ಕುಟ್ಟಿ ಸಖಾಫಿ ನಿಲಂಬೂರು ಹೇಳಿದರು.
ಅವರು ಉಳ್ಳಾಲ ದರ್ಗಾ ದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ಗುರುವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಧರ್ಮ ಮತ್ತು ದೇವರ ಮೇಲೆ ನಂಬಿಕೆ ವಿಶ್ವಾಸ ನಮಗಿರಬೇಕು. ಸೌಹಾರ್ದತೆಯ ಬದುಕು ನಮ್ಮದಾಗ ಬೇಕು. ಪ್ರವಾದಿ ಕಾಲದಲ್ಲಿಯೇ ಐಕ್ಯತೆ ಬದುಕು ಇತ್ತು.ಇದನ್ನು ನಾವು ಪಾಲನೆ ಮಾಡಿಕೊಂಡು ಬರಬೇಕು ಎಂದು ಕರೆ ನೀಡಿದರು.
ಅಬುಸುಫ್ಯಾನ್ ಮದನಿ ಧಾರ್ಮಿಕ ಪ್ರವಚನ ನೀಡಿದರು. ಸಯ್ಯಿದ್ ಸಿ.ಟಿ.ಎಂ. ಸಲೀಮ್ ತಂಙಳ್ ಕೆ.ಸಿ.ರೋಡ್ ದುಆ ನೆರವೇರಿಸಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದರ್ಗಾ ಮಾಜಿ ಅಧ್ಯಕ್ಷ ರಾದ ಕಣಚೂರು ಮೋನು, ಯು.ಎಸ್.ಹಂಝ, ಮಾರ್ಗ ತೆಲೆ ಜುಮಾ ಮಸೀದಿ ಅಧ್ಯಕ್ಷ ಹನೀಫ್ ಹಾಜಿ ಮಾರ್ಗತಲೆ, ಖತೀಬ್ ಉಸ್ಮಾನ್ ಸಖಾಫಿ, ಕಣಚೂರು ಮೆಡಿಕಲ್ ಕಾಲೇಜು ನಿರ್ದೇಶಕ ಅಬ್ದುಲ್ ರಹಿಮಾನ್, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಝೈನುದ್ದೀನ್ ಮೇಲಂಗಡಿ, ಅಬ್ದುಲ್ ಖಾದರ್ ಕೋಡಿ, ಇಮ್ತಿಯಾಝ್, ಅಬೂಬಕ್ಕರ್ ಹೈದರಲಿ ನಗರ, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್ , ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ , ಕೆಕೆಎಂ ಕಾಮಿಲ್ ಸಖಾಫಿ, ತಹಶೀಲ್ದಾರ್ ಪುಟ್ಟರಾಜು, ಆಹಾರ ನಿರೀಕ್ಷಕ ರಫೀಕ್, ಹಳೆ ಕೋಟೆ ಶಾಲೆಯ ಮುಖ್ಯೋಪಾಧ್ಯಾಯ ಕೆಎಂಕೆ ಮಂಜನಾಡಿ, ಕೋಟೆಪುರ ಶಾಲೆಯ ಶಿಕ್ಷಕ ರಾದ ರಫೀಕ್ , ಫಾಝಿಲ್, ತಾಜುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.







