ಮಂಗಳೂರು: ಭಾರತೀಯ ಯೋಧರಿಗಾಗಿ ವಿಶೇಷ ಪ್ರಾರ್ಥನೆ

ಮಂಗಳೂರು: ಪಾಕಿಸ್ತಾನದ ಉಗ್ರರ ಮೇಲೆ ದಾಳಿ ಮುಂದುವರಿಸಿರುವ ಭಾರತೀಯ ಯೋಧರಿಗೆ ಒಳಿತಾಗಲು ಹಾರೈಸಿ ದ.ಕ.ಜಿಲ್ಲಾದ್ಯಂತ ಗುರುವಾರ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿತು.
ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾಮನ ಸಹಿತ ನಾನಾ ದೇವಸ್ಥಾಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು.
ಪಹಲ್ಗ್ಗಾಮ್ ಭಯೋತ್ಪಾಾದಕ ದಾಳಿಗೆ ಎದುರಾಗಿ ಭಾರತೀಯ ಸೇನೆಯು ಪಾಕಿಸ್ಥಾನದ ಉಗ್ರರ ನೆಲೆಗಳ ಮೇಲೆ ಆಪರೇಶನ್ ಸಿಂಧೂರ ಹೆಸರಲ್ಲಿ ಕಾರ್ಯಾಚಣೆ ನಡೆಸಿದ್ದನ್ನು ರಾಜ್ಯದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ವಾಗತಿಸಿ ಭಾರತೀಯ ಸೇನೆಯ ಒಳಿತಿಗೆ ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದರು. ಈ ಹಿನ್ನಲೆಯಲ್ಲಿ ಜಿಲ್ಲೆೆಯಾದ್ಯಂತ ಗುರುವಾರ ಪೂಜೆ, ಪ್ರಾರ್ಥನೆಗಳು ನಡೆದವು.
ದ.ಕ. ಜಿಲ್ಲೆಯ ಬಹುತೇಕ ಎಲ್ಲ ದೇವಾಲಯಗಳಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಸಹಿತ ಒಂದು ಹೊತ್ತಿನ ವಿಶೇಷ ಅಭಿಷೇಕ, ಪೂಜೆಗಳು ನಡೆದವು. ಪೂಜೆಯ ಬಳಿಕ ಭಾರತ ದೇಶ ಪಾಕಿಸ್ತಾನದ ವಿರುದ್ಧ ಹೋರಾಟದಲ್ಲಿ ಗೆದ್ದು ಬರಲಿ, ದೇಶದ ವೀರ ಯೋಧರಿಗೆ ಯುದ್ಧ ಎದುರಿಸುವ ಶಕ್ತಿ, ಮಾನಸಿಕ ಸ್ಥೈರ್ಯವನ್ನು ದೇವರು ಅನುಗ್ರಹಿಸಲಿ. ಯೋಧರಿಗೆ ಹಾಗೂ ಯೋಧರ ಕುಟುಂಬಕ್ಕೆ ಸದಾ ದೇವರ ಅನುಗ್ರಹವಿರಲಿ ಎಂದು ಪ್ರಾರ್ಥಿಸಲಾಯಿತು.





