ಮಾಡನ್ನೂರು ದರ್ಗಾ ಶರೀಫ್‌ನಲ್ಲಿ ದೇಶದ ಸೈನಿಕರಿಗಾಗಿ ವಿಶೇಷ ಪ್ರಾರ್ಥನೆ
ಮಂಗಳೂರು: ದೇಶಕ್ಕಾಗಿ ಜೀವದ ಹಂಗು ತೊರೆದು ಹೋರಾಡುತ್ತಿರುವ ಸೈನಿಕರ ಕ್ಷೇಮಕ್ಕಾಗಿ ಕಾವು ಮಾಡನ್ನೂರು ಮಸೀದಿ ಹಾಗೂ ದರ್ಗಾ ಶರೀಫ್‌ನಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ನೇತೃತ್ವ ವಹಿಸಿ ಮಾತನಾಡಿದ ಸ್ಥಳೀಯ ಇಮಾಂ ಎಸ್ ಬಿ ಮುಹಮ್ಮದ್ ದಾರಿಮಿಯವರು ದೇಶ ಸುರಕ್ಷತೆಯಲ್ಲಿದ್ದರೆ ಮಾತ್ರ ನಮಗೆ ಭವಿಷ್ಯ ಇರುವುದು. ದೇಶ ದುರ್ಬಲಗೊಂಡರೆ ಅದರ ಪರಿಣಾಮವನ್ನು ನಾವೇ ಎದುರಿಸಬೇಕಾಗುತ್ತದೆ ಎಂದರು.
ಒಂದು ವೇಳೆ ಪವಿತ್ರ ಮಕ್ಕಾ ಮದೀನ ಇರುವ ಸೌದಿ ದೇಶ ಅನ್ಯಾಯವಾಗಿ ನಮ್ಮ ದೇಶದ ವಿರುದ್ದ ನಿಂತರೆ ಅವರ ವಿರುದ್ದ ನಾವು ಹೋರಾಡಬೇಕೆಂದು ಉಲಮಾಗಳು ನಮಗೆ ಕಲಿಸಿದ್ದಾರೆ.
ಉಗ್ರವಾದಿಗಳ ಕೃತ್ಯದಿಂದಾಗಿ ಇವತ್ತು ಯುದ್ದದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಹೇಳಿದರು.
ದೇಶ ಪ್ರೇಮವು ಧರ್ಮದ ಭಾಗವಾಗಿದೆ ಎಂದು ಇಸ್ಲಾಂ ಧರ್ಮ ಕಲಿಸಿ ಕೊಟ್ಟಿದೆ ಎಂದರು. ಮಸೀದಿ ಅಧ್ಯಕ್ಷ ಬುಶ್ರಾ ಅಬ್ದಲ್ ಅಝೀಝ್,ಕಾರ್ಯದರ್ಶಿ ಬಿ ಎಂ ಅಬ್ದುಲ್ಲ, ಕೋಶಾಧಿಕಾರಿ ಯೂಸುಫ್ ಹಾಜಿ ಅರಳಿಯಡಿ ಸೇರಿದಂತೆ ಸಮಿತಿ ಪದಾಧಿಕಾರಿಗಳು ಜಮಾತರು ಭಾಗವಹಿಸಿದ್ದರು.
Next Story





