ಮದ್ರಸ ಹಾಜರಾತಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಫಾತಿಮತ್ ಅಫ್ರಿನಾಳಿಗೆ ‘ಸಮಸ್ತ’ ದಿಂದ ಪ್ರಶಸ್ತಿ

ಮಂಗಳೂರು , ಮೇ 11: ‘ಸಮಸ್ತ’ ಮದ್ರಸ ವಿದ್ಯಾಭ್ಯಾಸದಲ್ಲಿ 1 ನೇ ತರಗತಿಯಿಂದ +2 ವರೆಗೆ ಯಾವುದೇ ರಜೆಯಿಲ್ಲದೆ ಪೂರ್ಣ ಹಾಜರಾತಿಯೊಂದಿಗೆ ಪೂರ್ಣಗೊಳಿಸಿ 2025ರ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ 12ನೇಯ ತರಗತಿಯಲ್ಲಿ ಡಿಸ್ಟಿಂಕ್ಷನ್ ಪಡೆದು ವಿಶೇಷ ಸಾಧನೆ ಮಾಡಿದ ಪುತ್ತೂರು ಪರ್ಲಡ್ಕ ಹಯಾತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿನಿ ಫಾತಿಮಾ ಆಫ್ರೀನಾಗೆ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ವತಿಯಿಂದ ನಗದು ಹಾಗೂ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿಯನ್ನು ಕಲ್ಲಿಕೋಟಯಲ್ಲಿ ನಡೆದ ವಿದ್ಯಾಭ್ಯಾಸ ಬೋರ್ಡ್‌ನ ಕಾರ್ಯಕಾರಿ ಸಭೆಯಲ್ಲಿ ‘ಸಮಸ್ತ’ದ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಳ್ ವಿದ್ಯಾರ್ಥಿನಿಯ ಸಹೋದರ ಮುಸ್ತಾಫಾ ಎಕಿಜಾಲ್‌ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಅಧ್ಯಕ್ಷ ಪಿ.ಕೆ.ಮೂಸಕುಟ್ಟಿ ಹಝ್ರತ್, ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್, ನಾಯಕ ಪಿ.ಪಿ.ಉಮರ್ ಮುಸ್ಲಿಯಾರ್ ಕೊಯ್ಯೋಡ್, ಸಯ್ಯಿದ್ ಮುಹಮ್ಮದ್ ಕೋಯ ತಂಳ್ ಜಮಲುಲ್ಲೈಲಿ, ಕೆ.ಟಿ.ಹಂಝ ಮುಸ್ಲಿಯಾರ್, ಕೆ.ಉಮರ್ ಫೈಝಿ ಮುಕ್ಕಂ, ಡಾ.ಬಹಾಉದ್ದೀನ್ ನದ್ವಿ ಕೂರಿಯಾಡ್.ವಾಕೋಡ್ ಮೊಯ್ದೀನ್ ಕುಟ್ಟಿ ಫೈಝಿ, ಎಂ. ಸಿ. ಮಾಯಿನ್ ಹಾಜಿ, ಕೆ. ಎಂ ಅಬ್ದುಲ್ಲ ಮಾಸ್ಟರ್ ಕೊಟ್ಟಪುರಂ, ಡಾ. ಎನ್ ಎ. ಎಂ ಅಬ್ದುಲ್ ಖಾದರ್, ಇ. ಮೊಯ್ದೀನ್ ಫೈಝಿ ಪುತ್ತನಯಿ, ಇಸ್ಮಾಯೀಲ್ ಕುಂಞಿ ಹಾಜಿ ಮನ್ನಾರ್, ಎಸ್. ಸಈದ್ ಮುಸ್ಲಿಯಾರ್ ವಿಝಿಂಞಂ, ಎಂ. ಅಬ್ದುರ‌್ರಹ್ಮಾನ್ ಮುಸ್ಲಿಯಾರ್ ಕೊಡಗು, ಕೆ. ಮೋಯಿನ್ ಕುಟ್ಟಿ ಮಾಸ್ಟರ್, ಅಬ್ದುಲ್ ರಶೀದ್ ಹಾಜಿ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.







