ಮಂಗಳೂರು: ಅಂತರಾಷ್ಟ್ರೀಯ ದಾದಿಯರ ದಿನಾಚರಣೆ

ಮಂಗಳೂರು: ದಿನವಿಡೀ ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ದಾದಿಯರು ತಮ್ಮ ಆರೋಗ್ಯ ಕಾಪಾಡಿ ಕೊಳ್ಳುವ ನಿಟ್ಟೆ ಮೊದಲ ಆದ್ಯತೆ ನೀಡಬೇಕು ಎಂದು ಕ್ಷೇಮಾ ಡೀನ್ ಡಾ.ಸಂದೀಪ್ ರೈ ಕಿವಿಮಾತು ಹೇಳಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ದೇರಳಕಟ್ಟೆಯಲ್ಲಿರುವ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ನರ್ಸಿಂಗ್ ವಿಭಾಗದ ಆಶ್ರಯದಲ್ಲಿ ಸೋಮವಾರ ಆಸ್ಪತ್ರೆಯ ಚಿಂತನಾ ಸೆಮಿನಾರ್ ಸಭಾಂಗಣದಲ್ಲಿ ನಡದ ಅಂತಾರಾಷ್ಟ್ರೀಯ ದಾದಿಯರ ದಿನ ಉದ್ಘಾಟಿಸಿ ಮಾತನಾಡಿದರು.
ವೈದ್ಯರು ಬೆಳಗ್ಗೆ ಮತ್ತು ಅಗತ್ಯವಿರುವ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದು ಅರ್ಧ ಗಂಟೆ ರೌಂಡ್ಸ್, ಮೂರು ತಾಸು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿರುತ್ತಾರೆ. ಆದರೆ ದಾದಿಯರು ಹಣದ ಬಗ್ಗೆ ಯೋಚಿಸದೆ ದಿನವಿಡೀ ರೋಗಿಗಳ ಜೊತೆಯಲ್ಲೇ ಇರುತ್ತಾರೆ. ದಾದಿಯರು ಅರೋಗ್ಯದಲ್ಲಿದ್ದರೆ ಇತರರೂ ಆರೋಗ್ಯವಾಗಿರು ತ್ತಾರೆ. ಈ ನಿಟ್ಟಿನಲ್ಲಿ ಆಗಾಗ ಆರೋಗ್ಯ ತಪಾಸಣೆ ಮಾಡುತ್ತಾ ಇರಬೇಕು ಎಂದು ತಿಳಿಸಿದರು.
ಕೆ.ಎಸ್.ಹೆಗ್ಡೆ ಆಸ್ಪತ್ರೆಯವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಅರ್.ಶೆಟ್ಟಿ ಉಪಸ್ಥಿತರಿದ್ದರು. ನರ್ಸಿಂಗ್ ಅಧೀಕ್ಷಕಿ ಜೆಸಿಂತಾ ಕ್ರಾಸ್ತಾ ಸ್ವಾಗತಿಸಿದರು. ಪ್ರಮೀಳಾ ಡಿಸೋಜ ವಂದಿಸಿದರು.ರೀಮಾ ಡಿಸೋಜ ಮತ್ತು ಸಾಲಿಯಾ ಕಾರ್ಯಕ್ರಮ ನಿರೂಪಿಸಿದರು.





