ಕುರ್‌ಆನ್‌ಗೆ ಬೆಂಕಿ ಪ್ರಕರಣ: ಆರೋಪಿಗಳನ್ನು ಬಂಧಿಸಲು ಲೀಗ್ ಆಗ್ರಹ
ಮಂಗಳೂರು: ಬೆಳಗಾವಿಯ ಸಂತ ಬಸ್ತವಾಡ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿಯಿಂದ ಪವಿತ್ರ ಕುರ್‌ಆನ್ ಹಾಗೂ ಹದೀಸ್‌ಗಳ ಗ್ರಂಥಗಳನ್ನು ಹೊರಗಡೆ ಕೊಂಡೊಯ್ದು ಬೆಂಕಿಕೊಟ್ಟ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಮುಸ್ಲಿಮ್ ಲೀಗ್ ಪದಾಧಿಕಾರಿ ಗಳಾದ ಮುಹಮ್ಮದ್ ಇಸ್ಮಾಯೀಲ್ ಹಾಗೂ ರಿಯಾಝ್ ಹರೇಕಳ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಎಲ್ಲಾ ಧರ್ಮಗಳ ಧಾರ್ಮಿಕ ಗ್ರಂಥ ಸರ್ವಶ್ರೇಷ್ಠ ಮತ್ತು ಗೌರವಿಸುವುದು ಸರ್ವರ ಬಾಧ್ಯತೆಯಾಗಿದೆ. ಕುರ್‌ಆನ್ ಬೆಂಕಿ ಪ್ರಕರಣವನ್ನು ಮುಸ್ಲಿಂ ಸಮಾಜ ಎಂದೂ ಸಹಿಸಲ್ಲ. ರಾಜ್ಯ ಸರಕಾರ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳ ವಿರುದ್ಧ ದುರ್ಬಲ ಪ್ರಕರಣ ದಾಖಲಿಸಿದಲ್ಲಿ ಮುಸ್ಲಿಮ್ ಲೀಗ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
Next Story