ಕಿನ್ಯಾ ಕೇಂದ್ರ ಮಸೀದಿ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ಉಳ್ಳಾಲ: ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಇದರ ಮಹಾಸಭೆಯು ಜಮಾಅತ್ ಸಭಾಂಗಣದಲ್ಲಿ ಅಧ್ಯಕ್ಷ ಕೆ. ಸಿ ಇಸ್ಮಾಯಿಲ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸ್ಥಳೀಯ ಮುದರ್ರಿಸ್ ಮಜೀದ್ ದಾರಿಮಿ ದುಆ ನೆರವೇರಿಸಿದರು. ಪ್ರದಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ ವರದಿ ಮಂಡಿಸಿದರು. ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಸಾಗ್ ಜಮಾ ಖರ್ಚು ಲೆಕ್ಕಪತ್ರ ಮಂಡಿಸಿದರು.
ಬಳಿಕ ಮುಂದಿನ ಅವಧಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು .
ಅಧ್ಯಕ್ಷರಾಗಿ ಅಬುಸಾಲಿ ಹಾಜಿ ಕುರಿಯಕ್ಕರ್ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಹಾಜಿ ಪುದಿ ಯರಕ್ಕರ್, ಕೋಶಾಧಿಕಾರಿಯಾಗಿ ಸಾಧುಕುಂಞಿ ಹಾಜಿ ಸಾಗ್ ಬಾಗ್ ಉಪಾಧ್ಯಕ್ಷರಾಗಿ ಹಮೀದ್ ಕಿನ್ಯ,ಮೊಯ್ದೀನ್ ಹಾಜಿ , ಇಬ್ರಾಹಿಂ ಕೂಡಾರ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಹಾಜಿ ಸಾಗ್ , ಮೊಹಮ್ಮದ್ ಹಾಜಿ ಚಾಕತ ಪಡ್ಪು ಹಾಗೂ ಇತರ 40 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ರಚಿಸಲಾಯಿತು.
Next Story