ಸಿಬಿಎಸ್‌ಇ ಫಲಿತಾಂಶ ಪ್ರಕಟ: ದ.ಕ. ಜಿಲ್ಲೆಯಲ್ಲಿ ಉತ್ತಮ ಸಾಧನೆ
ರೆಡ್ ಕ್ಯಾಮೆಲ್ಸ್ ಇಸ್ಲಾಮಿಕ್ ಸ್ಕೂಲ್‌ಗೆ ಶೇ. 100 ಫಲಿತಾಂಶ

ಮಂಗಳೂರು , ಮೇ 13: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶಗಳು ಮಂಗಳವಾರ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಉತ್ತಮ ಸಾಧನೆ ಮಾಡಿದೆ.
12ನೇ ತರಗತಿಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕಠಿಣವಾಗಿದ್ದ ಹಿನ್ನೆಲೆಯಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಮಂಗಳೂರು ನಗರ ಭಾಗದಲ್ಲಿರುವ ಬಹುತೇಕ ಸಿಬಿಎಸ್‌ಇ ಶಾಲೆಗಳು 10ನೇ ತರಗತಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ.
ರೆಡ್ ಕ್ಯಾಮೆಲ್ಸ್ ಇಸ್ಲಾಮಿಕ್ ಸ್ಕೂಲ್‌ಗೆ ಶೇ 100 ಫಲಿತಾಂಶ
ನಗರದ ನೀರು ಮಾರ್ಗದ ರೆಡ್ ಕ್ಯಾಮೆಲ್ಸ್ ಇಸ್ಲಾಮಿಕ್ ಸ್ಕೂಲ್ 2024 -25 ನೇ ಸಾಲಿನ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದು ಶೇ 100 ಫಲಿತಾಂಶ ಬಂದಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story





