ಜಲಾಲ್ ಮಸ್ತಾನ್ ಆಂಡ್ ನೇರ್ಚೆಗೆ ಚಾಲನೆ

ಮಂಗಳೂರು, ಮೇ 14: ನಗರದ ಬಂದರ್‌ನಲ್ಲಿರುವ ಅಶೈಖ್ ಅಸ್ಸೆಯ್ಯದ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ ಅಲ್ ಬುಖಾರಿ(ಖ.ಸಿ)ರವರ 99ನೇ ಆಂಡ್ ನೇರ್ಚೆಯನ್ನು ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಮಖಾಮ್ ಝಿಯಾರತ್ ಹಾಗೂ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಸ್ಜಿದ್ ಝೀನತ್ ಭಕ್ಷ್ ಖತೀಬ್ ಸೈಯ್ಯದ್ ಶಂಸುದ್ದೀನ್ ಬಾಸಿತ್ ಬಾಅಲವಿ ತಂಳ್ ಅಲ್‌ಅನ್ಸಾರಿ ಕುಕ್ಕಾಜೆ, ಸೈಯ್ಯದ್ ಅಲ್‌ಹಾದಿ ಯಹ್ಯಾ ತಂಳ್ ಸಾಲ್ಮರ, ಉಪಾಧ್ಯಕ್ಷ ಅಶ್ರಫ್ ಕೆ.ಇ, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಸದಸ್ಯರಾದ ಅದ್ದು ಹಾಜಿ, ಸಮದ್ ಹಾಜಿ, ಮುಹಮ್ಮದ್ ಅಶ್ರಫ್ ಹಳೆಮನೆ, ಐ. ಮೊಯಿದಿನಬ್ಬ ಹಾಜಿ, ಮುಅಝ್ಝಿನರಾದ ಅಬ್ದುಲ್ ಹಮೀದ್ ಮುಸ್ಲಿಯಾರ್, ಅಶ್ರಫ್ ದಾರಿಮಿ, ಹಿಫ್ಲುಲ್ ಖುರಾನ್ ಉಸ್ತಾದರುಗಳಾದ ಜುನೈದ್ ಅಝ್ಹರಿ, ಅಝರುದ್ದೀನ್ ಅನ್ಸಾರಿ ಮತ್ತಿತರರು ಉಪಸ್ಥಿತರಿದ್ದರು.
Next Story