ಸಮಾಜದ ಆಗುಹೋಗುಗಳ ಬಗ್ಗೆ ಅಧ್ಯಯನ ಅಗತ್ಯ: ಅಹ್ಮದ್ ಬಾಖವಿ

ಉಳ್ಳಾಲ: ದಿನಗಳು ಉರುಳಿದಂತೆ ಸಮಾಜ ಬದಲಾಗುತ್ತಾ ಇರುತ್ತದೆ. ಪ್ರಸಕ್ತ ಕಾಲ ಘಟ್ಟದಲ್ಲಿ ಅಭಿವೃದ್ಧಿ ಜಾಸ್ತಿ ಆಗುತ್ತಿದ್ದರೂ ಕೆಲವು ಪ್ರಮುಖ ವಿಚಾರಗಳಲ್ಲಿ ನಾವು ಹಿಂದುಳಿಯುತ್ತಿದ್ದೇವೆ ಎಂದು ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ ಹೇಳಿದರು.
ಅವರು ಉಳ್ಳಾಲ ದರ್ಗಾ ದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ಬುಧವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಒಂದರಲ್ಲೇ ಅಭಿವೃದ್ಧಿ ಸಾಧ್ಯವಿಲ್ಲ. ಜೊತೆ ಗೆ ಸಮಾಜದ ಆಗುಹೋಗುಗಳ ಬಗ್ಗೆ ನಾವು ಅಧ್ಯಯನ ಮಾಡಬೇಕಾಗಿದೆ. ಇವು ಶಿಕ್ಷಣಕ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಮುಹಮ್ಮದ್ ಫಾಝಿಲ್ ನೂರಾನಿ ಅಸ್ಸಖಾಫಿ, ರಹ್ಮತುಲ್ಲಾ ಸಖಾಫಿ ಎಳಮರಮ್ ಧಾರ್ಮಿಕ ಪ್ರವಚನ ನೀಡಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಝೀನತ್ ಭಕ್ಷ್ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ, ಎಸ್.ಕೆ.ಎಮ್.ಎಮ್.ಎ.ಡಿ.ಕೆ. ಕೋಶಾಧಿಕಾರಿ ಅಬ್ದುಲ್ ಖಾದರ್, ಅಲೀ ಜುಮಾ ಮಸೀದಿ ಅಧ್ಯಕ್ಷ ಮುಹ್ ಯಿದ್ದೀನ್, ಖತೀಬ್ ಕಬೀರ್ ಸಅದಿ, ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಇಸ್ಹಾಕ್, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಅಬ್ದುಲ್ ಖಾದರ್ ಕೋಡಿ, ಆಸೀಫ್ ಸುಂದರಿ ಬಾಗ್, ಅಬೂಬಕ್ಕರ್ ಹೈದರಲಿ ನಗರ, ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಇಮ್ತಿಯಾಝ್, ಕಣಚೂರು ಮೆಡಿಕಲ್ ಕಾಲೇಜು ನಿರ್ದೇಶಕ ಅಬ್ದುಲ್ ರಹ್ಮಾನ್, ಅರೆಬಿಕ್ ಕಾಲೇಜು ಪ್ರೊ. ಇಬ್ರಾಹಿಂ ಅಹ್ಸನಿ, ಉಪಾಧ್ಯಕ್ಷ ಅಶ್ರಫ್ ಹಾಜಿ,ತಂಝೀಲ್ ಯು.ಟಿ., ಆಝಾದ್ ಇಸ್ಮಾಯಿಲ್ , ಸಾಜಿದ್ ಉಳ್ಳಾಲ,ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ ,ಅಬ್ಬಾಸ್ ಮದನಿ ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.