ಬ್ಯಾರಿ ಕಿರು ನಾಟಕ ತರಬೇತಿಗೆ ಅರ್ಜಿ ಆಹ್ವಾನ

ಮಂಗಳೂರು: ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿ ಬ್ಯಾರಿ ಭಾಷೆಯಲ್ಲಿ ಹೆಚ್ಚು ನಾಟಕಗಳು ಮೂಡಿಬರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಱಬ್ಯಾರಿ ಕಿರುನಾಟಕ ತರಬೇತಿ ಕಾರ್ಯಾಗಾರ ಮತ್ತು ಸರಣಿ ಪ್ರದರ್ಶನೞ ಯೋಜನೆಯನ್ನು ಹಮ್ಮಿಕೊಂಡಿದೆ.
ವಿ೪ ನ್ಯೂಸ್ ಚಾನೆಲ್ (ಎಲ್.ಎಸ್. ಮೀಡಿಯಾ)ನ ಸಹಯೋಗದೊಂದಿಗೆ, ಹತ್ತು ದಿನಗಳ ಕಾಲ ಮಂಗಳೂರಿನಲ್ಲಿ ನಡೆಯಲಿರುವ ಬ್ಯಾರಿ ನಾಟಕ ತರಬೇತಿ ಕಾರ್ಯಾಗಾರದಲ್ಲಿ ಸಿನಿಮಾ ನಿರ್ದೇಶಕರು ಮತ್ತು ಹಿರಿಯ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಿದ್ದಾರೆ.
ಕಾರ್ಯಾಗಾರಕ್ಕೆ ಆಯ್ಕೆಯಾದ ಕಲಾವಿದರಿಗೆ ಪ್ರವೇಶ ಉಚಿತವಾಗಿದ್ದು, ತರಬೇತಿ ಸಮಯದಲ್ಲಿ ಊಟೋಪಚಾರ, ಬಸ್ ಪ್ರಯಾಣ ವೆಚ್ಚ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ತರಬೇತಿ ಪಡೆದ ಆಯ್ದ ಕಲಾವಿದರ ತಂಡದಿಂದ ನಾಟಕ ಪ್ರದರ್ಶನ ಕಾರ್ಯಕ್ರಮವನ್ನೂ ಅಕಾಡಮಿ ವತಿಯಿಂದ ಹಮ್ಮಿಕೊಳ್ಳಲಾಗುವುದು.
ತರಬೇತಿ ಪಡೆಯಲಿಚ್ಚಿಸುವ ಆಸಕ್ತರು ನೋಂದಾವಣೆಗಾಗಿ ತಮ್ಮ ಹೆಸರು, ಪೂರ್ಣ ಅಂಚೆ ವಿಳಾಸ, ವಿದ್ಯಾರ್ಹತೆ ಮತ್ತು ದೂರವಾಣಿ ಸಂಖ್ಯೆ ಬರೆದು ಮೇ ೨೫ರ ಒಳಗಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ೨ನೇ ಮಹಡಿ, ಸಾಮರ್ಥ್ಯ ಸೌಧ, ಮಿನಿ ವಿಧಾನಸೌಧದ ಬಳಿ, ಮಂಗಳೂರು-575001,ಇಮೇಲ್- bearyacademy@yahoo.in