ಪಿ.ಎ. ತಾಂತ್ರಿಕ ಮಹಾವಿದ್ಯಾಲಯ ವಾರ್ಷಿಕೋತ್ಸವ

ಕೊಣಾಜೆ: ಪಿಎ ಕಾಲೇಜು ಆಫ್ ಎಂಜಿನಿಯರಿಂಗ್‌ನ ವಾರ್ಷಿಕೋತ್ಸವ ಸಮಾರಂಭ 'ಪಿಎಸಿಇ ಡೇ 2025' ಇತ್ತೀಚೆಗೆ ಕಾಲೇಜಿನ ಆಡಿಯೋಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೀಸ್ ಎಂ.ಕೆ. ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಳ್ವಾಸ್ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಅಳ್ವ, ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ, ಕೌಶಲದೊಂದಿಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಪಿಎಸಿಟಿ ಸಲಹೆಗಾರ ಡಾ. ಅಬ್ದುಲ್ ರಹೀಮಾನ್ ಎಂ, ಶರಫುದ್ದೀನ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಸುರ್ಫರಾಝ್ ಜೆ ಹಾಸೀಮ್, ಪಿಎ ಫಾರ್ಮಸಿ ಕಾಲೇಜು ಡಾ. ಸಲೀಮುಲ್ಲಾ ಖಾನ್, ಡಾ. ಹಫೀಫಾ ಸಲೀಮ್, ಡಾ. ಸಯ್ಯದ್ ಅಮೀನ್ ಅಹಮದ್ ಮೊದಲಾದವರು ಭಾಗವಹಿಸಿದ್ದರು.
ಉಪಪ್ರಾಂಶುಪಾಲೆ ಡಾ. ಶರ್ಮಿಲಾ ಕುಮಾರಿ ಸ್ವಾಗತಿಸಿದರು.ಐಒಟಿ ವಿಭಾಗದ ಮುಖ್ಯಸ್ಥರು ಡಾ. ಶಮ್ನಾ ವಂದಿಸಿದರು.
ಸಹ-ಶೈಕ್ಷಣಿಕ ಕ್ಲಬ್ ಸಂಯೋಜಕರು ಇಸ್ಮಾಯಿಲ್ ಶಾಫಿ, ಸಹಾಯಕ ಪ್ರಾಧ್ಯಾಪಕ ಮೊಹಮ್ಮದ್ ಸಲೀಂ, ಸಫಾ ಸನಾ, ಡಾ. ಇಕ್ಬಾಲ್ ಕಾರ್ಯಕ್ರಮ ಸಂಯೋಜಿಸಿದರು.
ಫಾತಿಮತ್ ರೈಹಾನ್, ಶಬೀಬ ಕಾರ್ಯಕ್ರಮವನ್ನು ನಿರೂಪಿಸಿದರು.





