ಗೂನಡ್ಕದ ಅಬ್ದುಲ್ ಖಾದರ್ ಕಣ್ಣೂರು ಜೈಲಿನಲ್ಲಿ ನಿಧನ

ಸುಳ್ಯ: ಪ್ರಕರಣ ಒಂದರಲ್ಲಿ ಸುಮಾರು 5 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕಲ್ಲುಗುಂಡಿ ಸಮೀಪದ ಗೂನಡ್ಕ ದರ್ಕಾಸು ನಿವಾಸಿ ಅಬೂಬಕ್ಕರ್ ಸಿದ್ದೀಕ್ ಎಂಬವರು ಕೇರಳದ ಕಣ್ಣೂರು ಜೈಲಿನಲ್ಲಿ ಶನಿವಾರ ನಿಧನರಾಗಿದ್ದಾರೆ.
ಅಬೂಬಕ್ಕರ್ ಸಿದ್ದೀಕ್ ರವರು ಮೂಲತಃ ಗೂನಡ್ಕ ದರ್ಕಾಸು ನಿವಾಸಿಯಾಗಿದ್ದು ಕಳೆದ ಐದು ವರ್ಷಗಳ ಹಿಂದೆ ಕೇರಳದ ಕಾಞಂಗಾಡ್ ನಲ್ಲಿ ಪ್ರಕರಣ ಒಂದಕ್ಕೆ ಸಂಬಂಧಿಸಿ ಕಣ್ಣೂರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಕೇರಳದ ಅನೇಕ ಕಡೆಗಳಲ್ಲಿ ಮಸೀದಿಯಲ್ಲಿ ಮುಅಲ್ಲಿಮರಾಗಿ ಕೆಲಸ ಮಾಡಿಕೊಂಡಿದ್ದ ಇವರು ಕೇರಳದಲ್ಲೂ ಇನ್ನೊಂದು ವಿವಾಹವಾಗಿದ್ದರು.
ಇದೀಗ ಅವರು ನಿಧನರಾದ ವಿಷಯ ತಿಳಿದು ಅವರ ಮನೆಯವರು ಮೃತ ದೇಹವನ್ನು ಸಂದರ್ಶಿಸಿ ತರಲು ಕಣ್ಣೂರು ಜೈಲಿಗೆ ತೆರಳಿದ್ದಾರೆ.
Next Story





