ರೈಲಿನಲ್ಲಿ ಹೃದಯಾಘಾತಕ್ಕೊಳದ ಎಎಸ್‌ಐ ಮೃತ್ಯು

ಮಂಗಳೂರು, ಮೇ 18: ಮಂಗಳೂರು-ಚೆನ್ನೈ ಮೇಲ್‌ನಲ್ಲಿ ಶನಿವಾರ ಹೃದಯಾಘಾತದಿಂದ ಸಿಐಎಸ್‌ಎಫ್‌ನ ಸಹಾಯಕ ಉಪ ನಿರೀಕ್ಷಕ (ಎಎಸ್‌ಐ) ಮೃತಪಟ್ಟ ಘಟನೆ ವರದಿಯಾಗಿದೆ.
ಸಿಐಎಸ್‌ಎಫ್‌ನ ಸಹಾಯಕ ಉಪ ನಿರೀಕ್ಷಕ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಲಿಂಗಮುದ್ರಂ ಮಂಡಲ್‌ನ (ಎಎಸ್‌ಐ) ಎ ರಮಣಯ್ಯ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.
ಮೇ 17 ರಂದು ಮಧ್ಯಾಹ್ನ 1:35 ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ರೈಲಿನ ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ರಮಣಯ್ಯ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ತಕ್ಷಣ ನಗರದ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story





