ಗಡಿಯಾರ: ಮದ್ರಸದಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಕಾರ್ಯಕ್ರಮ

ಬಂಟ್ವಾಳ: ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಆಶ್ರಯದಲ್ಲಿ ಮದ್ರಸಗಳನ್ನು ಕೇಂದ್ರೀಕರಿಸಿ ಹಮ್ಮಿಕೊಂಡಿದ್ದ ಮಾದಕ ವ್ಯಸನದ ವಿರುದ್ಧ ಅಭಿಯಾನ ಪ್ರಯುಕ್ತ ವಿಶೇಷ ಅಸೆಂಬ್ಲಿಯು ಗಡಿಯಾರದ ಮಿಫ್ತಾಹುಲ್ ಉಲೂಮ್ ಮದ್ರದ ನಡೆಯಿತು.
ಗಡಿಯಾರ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಮುಹಮ್ಮದಲಿ ದಾರಿಮಿ ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರಿಗೆ ಇಂತಹ ಮಾದಕ ವ್ಯಸನದ ಬಗೆಗಿನ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಪ್ರಸಕ್ತ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಆಯೋಜಿಸುತ್ತಿರುವ ಅನಿವಾರ್ಯತೆ ಎದುರಾಗಿರುವುದು ವಿಷಾದನೀಯ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಬಹಳ ಜಾಗರೂಕರಾಗಿರಬೇಕು ಎಂದರು.
ಆಡಳಿತ ಸಮಿತಿಯ ಜೊತೆ ಕಾರ್ಯದರ್ಶಿ ಸನಾವುಲ್ಲ ಗಡಿಯಾರ, ಇಕ್ಬಾಲ್ ಪಟಿಲ, ಹನೀಫ್ ಮೇಸ್ತ್ರಿ, ಅಧ್ಯಾಪಕರಾದ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಅಲ್ತಾಫ್ ದಾರಿಮಿ, ಲತೀಫ್ ಅಝ್ಹರಿ ಉಪಸ್ಥಿತರಿದ್ದರು.
ಮದ್ರಸ ವಿದ್ಯಾರ್ಥಿಗಳು ಮಾದಕ ದ್ರವ್ಯ ವಿರೋಧಿ ಪ್ಲ ಕಾರ್ಡ್ ಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಎಸ್ಕೆಎಸ್ಬಿವಿ ಅಧ್ಯಕ್ಷ ಅಬ್ದುಲ್ ಫತ್ತಾಹ್ ಮಾದಕ ವ್ಯಸನದ ವಿರುದ್ಧ ಪ್ರತಿಜ್ಞಾ ವಿಧಿ ಬೋಧಿಸಿದರು.
ಗಡಿಯಾರ ಮುಹಿಯದ್ದೀನ್ ಜುಮಾ ಮಸೀದಿಯ ಲೆಕ್ಕ ಪರಿಶೋಧಕ ಪಿ.ಜೆ. ಅಬ್ದುಲ್ ಅಝೀಝ್ ಪ್ರಸ್ತಾವನೆಗೈದರು.
ಮದ್ರಸ ಸದರ್ ಉಸ್ತಾದ್ ಶಮೀಮುದ್ದೀನ್ ಹುದವಿ ಮೂಡಿಗೆರೆ ಸ್ವಾಗತಿಸಿ, ವಂದಿಸಿದರು.