ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ಸಂಭ್ರಮಾಚರಣೆ

ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಆಯೋಜಿಸಲಾಗಿದ್ದ ‘ಉತ್ಸವ 2025’ ಹೆಸರಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧಾ ಕಾರ್ಯಕ್ರಮಗಳ ಪ್ರಯುಕ್ತ ನಡೆದ ಮುಖದ ಮೇಲೆ ಚಿತ್ರ ರಚನೆ, ಮೆಹಂದಿ ಕಲೆ, ಏಕಪಾತ್ರಾಭಿನಯ, ಪುಷ್ಪ ವ್ಯವಸ್ಥೆ, ರಂಗೋಲಿ, ಚರ್ಚಾಸ್ಪರ್ಧೆ, ಬೆಂಕಿಯಿಲ್ಲದೆ ಅಡುಗೆ ಮಾಡುವ ಸ್ಪರ್ಧೆ, ರೀಲ್ಸ್ ನಿರ್ಮಾಣ, ನಿಧಿ ಬೇಟೆ, ಏಕಾಂಗಿ ಹಾಗೂ ಸಾಮೂಹಿಕ ಗಾಯಕ, ಹಗುರ ವಿಡಂಬನೆ, ಅಣಕು ನಾಟಕ, ಏಕಾಂಗಿ ನೃತ್ಯ ಹಾಗೂ ಪಾಶ್ಚಿಮಾತ್ಯ ನೃತ್ಯದಂತಹ ವೈವಿಧ್ಯಮಯ ಸ್ಪರ್ಧೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಿಎಸ್ಇ ವಿಭಾಗದ ಆರನೆ ಸೆಮಿಸ್ಟರ್ ವಿದ್ಯಾರ್ಥಿನ ತೇಜಸ್ವಿನಿ ಗೌಡರ ಸ್ವಾಗತ ಭಾಷಣದೊಂದಿಗೆ ಈ ಕಾರ್ಯಕ್ರಮ ಪ್ರಾರಂಭಗೊಂಡಿತು. ನಂತರ ಎಐ ಮತ್ತು ಡಿಎಸ್ ವಿಭಾಗದ ಆರನೆಯ ಸೆಮಿಸ್ಟರ್ ನ ಉತ್ಸಾಹಿ ವಿದ್ಯಾರ್ಥಿನಿಯರಾದ ಫರಿಯಾ ಶೇಖ್ ಹಾಗೂ ಪರ್ಯಾ ನಾಝ್ ಅವರ ನಿರೂಪಣೆಯೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ದೊರೆಯಿತು.
ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಎಸ್.ಐ.ಮಂಜೂರ್ ಬಾಷಾ ಹಾಗೂ ಬಿಐಇಎಸ್ ನ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫಾರ ಸ್ಪೂರ್ತಿಯದಾಯಕ ಭಾಷಣದೊಂದಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ದೊರೆಯಿತು. ಈ ಇಬ್ಬರೂ ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಭಾಗವಹಿಸುವಿಕೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇದರೊಂದಿಗೆ, ಈ ಕಾರ್ಯಕ್ರಮವನ್ನು ದಣಿವರಿಯದ ಪ್ರಯತ್ನಗಳೊಂದಿಗೆ ಆಯೋಜಿಸಿದ ಸಂಘಟಕರು ಹಾಗೂ ಕಾಲೇಜಿನ ಸಿಬ್ಬಂದಿಗಳನ್ನೂ ಪ್ರಶಂಸಿಸಿದರು.
ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಸಮಾರೋಪಗೊಂಡ ನಂತರ, ಮೂಲಭೂತ ವಿಜ್ಞಾನ ವಿಭಾಗದ ಉಪನ್ಯಾಸಕಿ ಡಾ. ವಿನುತಾ ಅವರು ಈ ವರ್ಷದ ಶೈಕ್ಷಣಿಕ ಸಾಧಕರ ಪಟ್ಟಿಯನ್ನು ಪ್ರಕಟಿಸಿದರು.
ಸಾಂಸ್ಕೃತಿಕ ಸ್ಪರ್ಧೆಯ ವಿಜೇತರ ಹೆಸರುಗಳನ್ನು ಎಐ ಮತ್ತು ಡಿಎಸ್ ನ ವಿಭಾಗದ ಮುಖ್ಯಸ್ಥ ಡಾ. ಮೆಹಬೂಬ್ ಮುಜಾವರ್ ಪ್ರಕಟಿಸಿದರೆ, ಕ್ರೀಡಾ ಸ್ಪರ್ಧೆಗಳ ವಿಜೇತರ ಹೆಸರುಗಳನ್ನು ಸಿವಿಲ್ ವಿಭಾಗದ ಪ್ರಾಧ್ಯಾ ಪಕ ಪ್ರೊ. ಝಹೀರ್ ಅಹ್ಮದ್ ಘೋಷಿಸಿದರು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.