ಕಾರಿಗೆ ಟಿಂಟೆಡ್ ಗ್ಲಾಸ್: ಮಾಹಿತಿ ನೀಡಲು ಸೂಚನೆ

ಮಂಗಳೂರು, ಜೂ.4: ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜೂ.2ರಿಂದ 4ರವರೆಗೆ ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರಿನ ಗ್ಲಾಸ್‌ಗಳಲ್ಲಿ ಬ್ಲ್ಯಾಕ್‌ಫಿಲ್ಮ್ (ಸನ್ ಫಿಲ್ಮ್) ಅಥವಾ ಟಿಂಟೆಡ್ ಗ್ಲಾಸ್‌ಗಳನ್ನು ಅಳವಡಿಸಿ ಸಂಚರಿಸುವ ವಾಹನಗಳ ವಿರುದ್ಧ 326 ಪ್ರಕರಣ ಗಳನ್ನು ದಾಖಲಿಸಿದ್ದಾರೆ.
ವಾಹನಗಳ ಮಾಲಕರ/ಚಾಲಕರ ಪ್ರಕರಣವನ್ನು ದಾಖಲಿಸಿರುವ ಪೊಲೀಸರು 1.63 ಲಕ್ಷ ರೂ. ದಂಡ ವಿಧಿಸಿದ್ದಾರೆ. ಕಿಂಡೆಡ್ ಗ್ಲಾಸ್‌ಗಳನ್ನು ಅಳವಡಿಸಿಕೊಂಡು ಸಂಚರಿಸುವ ಕಾರಿನ ನೋಂದಣಿ ಸಂಖ್ಯೆ, ದಿನಾಂಕ ಮತ್ತು ಸಮಯ ಹಾಗೂ ಸಾಧ್ಯವಾದಲ್ಲಿ ಪೋಟೋ ಹಾಗೂ ಸ್ಥಳದ ವಿವರಗಳ ಮಾಹಿತಿಯನ್ನು (ನಗರ ಕಂಟ್ರೋಲ್ ರೂಮ್: 9480802321/ಎಸಿಪಿ ಟ್ರಾಫಿಕ್: 9480802312) ವಾಟ್ಸ್‌ಆ್ಯಪ್ ಅಥವಾ ಮೊಬೈಲ್ ಮೂಲಕ ಮಾಹಿತಿ ನೀಡುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
Next Story