ಮಂಗಳೂರು: ಹಲ್ಲೆಗೊಳಗಾದ ಖಲಂದರ್ ಶಾಫಿಯನ್ನು ಭೇಟಿಯಾದ ಬಿ ಕೆ ಹರಿಪ್ರಸಾದ್

ಮಂಗಳೂರು: ಕೊಳತ್ತಮಜಲಿನಲ್ಲಿ ಇತ್ತೀಚಿಗೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಲಂದರ್ ಶಾಫಿ ಅವರನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗು ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭ ಮಾಜಿ ಮೇಯರ್ ಅಶ್ರಫ್, ರಫೀಖ್ ಕಣ್ಣೂರ್, ಲುಖ್ಮಾನ್ ಬಂಟ್ವಾಳ, ಕಾರ್ಪೊರೇಟರ್ ಅಬ್ದುಲ್ ರವೂಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂಎ ಗಫೂರ್ ಮತ್ತಿತರರು ಉಪಸ್ಥಿತರಿದ್ದರು.
ಮೇ 27ರಂದು ಅಬ್ದುಲ್ ರಹ್ಮಾನ್ ಹಾಗು ಶಾಫಿ ಅವರ ಮೇಲೆ ದೀಪಕ್ ಹಾಗು ತಂಡದಿಂದ ತಲವಾರು ದಾಳಿ ನಡೆದಿತ್ತು. ಅದರಲ್ಲಿ ರಹ್ಮಾನ್ ಮೃತಪಟ್ಟಿದ್ದರು.
Next Story





