ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ನಿಯೋಗ ಚರ್ಚೆ

ಮಂಗಳೂರು, ಜೂ.5: ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನಿಯೋಗವು ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ನಿರ್ದೇಶನದಂತೆ ಪೊಲೀಸ್ ಮಹಾನಿರೀಕ್ಷಕರು, ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಗುರುವಾರ ಭೇಟಿಯಾಗಿ ಬಕ್ರೀದ್ ಹಬ್ಬದಂದು ಧಾರ್ಮಿಕ ವಿಧಿ ವಿಧಾನಗಳಿಗೆ ಧಕ್ಕೆ ಬರದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಲು ಮನವಿ ಸಲ್ಲಿಸಿ ಪ್ರಸಕ್ತ ಸನ್ನಿವೇಶದ ಬಗ್ಗೆ ಚರ್ಚಿಸಲಾಯಿತು.
ಕಮಿಟಿಯ ಉಪಾಧ್ಯಕ್ಷ ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಡಿ.ಎಂ.ಅಸ್ಲಂ, ಹಾಜಿ ಬಿ.ಅಬೂಬಕ್ಕರ್, ಹಾಜಿ ಅಹ್ಮದ್ ಬಾವ ಪಡೀಲ್, ಹಾಜಿ ರಿಯಾಝುದ್ದೀನ್, ಎಂ.ಎ. ಅಶ್ರಫ್, ಹಾಜಿ ಅಬ್ದುಲ್ ಮಜೀದ್ ಸಿತಾರ್, ನೂರುದ್ದೀನ್ ಸಾಲ್ಮರ, ಅಬ್ಬಾಸ್ ಉಚ್ಚಿಲ್, ನಾಸೀರ್ ಯಾದ್ಗಾರ್, ರಫೀಕ್ ಕೊಡಾಜೆ, ಇಕ್ಬಾಲ್ ಅಹ್ಮದ್ ಮುಲ್ಕಿ ನಿಯೋಗದಲ್ಲಿದ್ದರು.
Next Story





