ಸುಳ್ಯ: ಹೆರಿಗೆಯಾದ ಬಳಿಕ ರಕ್ತಸ್ರಾವದಿಂದ ಮಹಿಳೆ ಮೃತ್ಯು; ಪ್ರಕರಣ ದಾಖಲು

ಸುಳ್ಯ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಹೆರಿಗೆಯಾದ ಬಳಿಕ ರಕ್ತಸ್ರಾವದಿಂದ ಸಾವನ್ನಪ್ಪಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ ಸಂಪಾಜೆಯ ಸುರೇಂದ್ರ ಕೆ.ಕೆ. ಎಂಬವರ ತಂಗಿ ಮಧುರ (28) ಮೃತರು. ಮಧುರ ಅವರು ಹೆರಿಗೆಗಾಗಿ ಜೂ.2ರಂದು ಸುಳ್ಯ ತಾಲೂಕು ಆಸ್ಪತ್ರೆಗೆ ದಾಖಲಾಗಿ ಜೂ.3ರಂದು ಹೆರಿಗೆಯಾಗಿರುತ್ತದೆ. ರಾತ್ರಿ ವೇಳೆ ತಾಯಿಗೆ ರಕ್ತಸ್ರಾವ ಆಗುತ್ತಿದೆ ಎಂದು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿ ತಿಳಿಸಿ ಅಂಬುಲೆನ್ಸ್ ಮುಖಾಂತರ ಕರೆದುಕೊಂಡು ಹೋಗಿ ರಾತ್ರಿ 11.30ಕ್ಕೆ ಆಸ್ಪತ್ರೆ ತಲುಪಿ ದಾಖಲಿಸಲಾಗಿದ್ದು, ಮಧುರ ಅವರು ರಾತ್ರಿ 12 ಗಂಟೆಗೆ ಸಾವಿಗೀಡಾಗಿರುವ ಬಗ್ಗೆ ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ.
ಮಧುರ ಅವರ ಮರಣಕ್ಕೆ ವೈದ್ಯಾಧಿಕಾರಿಯವರ ನಿರ್ಲಕ್ಷವೇ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
Next Story





