ಉಕ್ಕುಡ ಜಮಾಅತ್ ಎನ್ನಾರೈ ಫೋರಂ ಲಾಂಛನ ಬಿಡುಗಡೆ

ವಿಟ್ಲ: ಸಮೀಪದ ಉಕ್ಕುಡ ಬದ್ರಿಯಾ ಜುಮಾ ಮಸೀದಿ ಜಮಾಅತ್ ಗೆ ಒಳಪಟ್ಟ ಎನ್ನಾರೈ ಸದಸ್ಯರ ಒಕ್ಕೂಟ "ಉಕ್ಕುಡ ಜಮಾಅತ್ ಎನ್ನಾರೈ ಫೋರಂ" ನ ಲಾಂಛನವನ್ನು ಈದ್ ದಿನ ಮಸೀದಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಉಕ್ಕುಡ ಮಸೀದಿ ಮುದರ್ರಿಸ್ ಹಾಫಿಝ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಮಳಲಿ ಅವರು ಲಾಂಛನ ಬಿಡುಗಡೆಗೊಳಿಸಿದರು.
ಜಮಾಅತ್ ಕಮಿಟಿ ಅಧ್ಯಕ್ಷ ಮುನೀರ್ ದರ್ಬೆ, ಪ್ರಧಾನ ಕಾರ್ಯದರ್ಶಿ ಅಶ್ರಫಲಿ ನೆಕ್ಕರೆಕಾಡು, ಎನ್ನಾರೈ ಪ್ರವಾಸಿ ಸದಸ್ಯರಾದ ಅಬ್ದುಲ್ಲ ಆಲಂಗಾರು, ಆಶಿಕ್ ಫೋಕಸ್, ಇರ್ಶಾದ್ ಆಲಂಗಾರು, ಬಾತಿಷ್, ಶಮೀರ್, ಶಂಸುದ್ದೀನ್, ಬಶೀರ್ ಸರೋಳಿ, ಶಂಸುದ್ದೀನ್ ಉಕ್ಕುಡ, ಸಿರಾಜ್ ಸರೋಳಿ, ಅನೀಶ್ ಆಲಂಗಾರು, ಹಮೀದ್, ಫಾಯಿಝ್ ಉಕ್ಕುಡ, ಫಯಾಝ್ ಉಪಸ್ಥಿತರಿದ್ದರು.
ಸೌದಿ ಅರೇಬಿಯಾ, ಯುಎಇ, ಖತಾರ್, ಬಹರೈನ್, ಮಸ್ಕತ್, ಮಲೇಷಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಉಕ್ಕುಡ ಜಮಾಅತ್ ವ್ಯಾಪ್ತಿಯ ಪ್ರವಾಸಿ ಎನ್ನಾರೈ ಸದಸ್ಯರಿದ್ದು, ತಾಯ್ನಾಡು ಮತ್ತು ಉಕ್ಕುಡ ಜಮಾಅತ್ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
Next Story







