ಅಮೆಮ್ಮಾರ್, ಬದ್ರಿಯಾ ಮಸೀದಿಯಲ್ಲಿ ಸಂಭ್ರಮದ ‘ಈದುಲ್ ಅಝ್‌ಹಾ’ ಆಚರಣೆ

ಫರಂಗಿಪೇಟೆ, ಜೂ. 7: ಬದ್ರಿಯಾ ಜುಮ್ಮಾ ಮಸೀದಿ ಅಮೆಮ್ಮಾರ್ ವತಿಯಿಂದ ಶನಿವಾರ ಸಂಭ್ರಮದ ಈದುಲ್ ಅಝ್‌ಹಾ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಕ್ರೀದ್ ಸಂದೇಶ ನೀಡಿದ ಖತೀಬ್ ಅಬೂಬಕ್ಕರ್ ಸಿದ್ದೀಕ್ ಫೈಝಿ ಈದುಲ್ ಅಝ್‌ಹಾ (ಬಕ್ರೀದ್ ) ಹಬ್ಬ ತ್ಯಾಗ ಬಲಿದಾನದ ಪ್ರತೀಕ, ಇದು ಮಾನವೀಯತೆಯ ದಯೆ ಮತ್ತು ಇತರರಿಗಾಗಿ ಮಿಡಿಯುವ ತ್ಯಾಗದ ಸಂಕೇತ ಆ ತ್ಯಾಗ ಸಮರ್ಪಣಾ ಮನೋಭಾವ ಸಮಾಜವನ್ನು ನ್ಯಾಯ, ಸಮಾನತೆ, ಬಾತೃತ್ವ, ಮೌಲ್ಯಗಳನ್ನು ಸ್ರಷ್ಟಿಸುತ್ತಾ ಸಮಾಜವನ್ನು ಸಧ್ರಡಗೊಳಿಸುತ್ತದೆ ಈ ಬಕ್ರೀದ್ ಹಬ್ಬ ಸಂಪೂರ್ಣ ಮಾನವ ಸಮಾಜಕ್ಕೆ ಶಾಂತಿ ಸಮಾಧಾನ ತರಲಿ ಎಂದರು
ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬೂಸ್ವಾಲಿಹ್ ಉಸ್ತಾದ್, ಉಪಾಧ್ಯಕ್ಷ ಎಫ್. ಎ ಖಾದರ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಾಫಿ, ಕಾರ್ಯದರ್ಶಿ ಹೈದರ್, ಕೋಶಾಧಿಕಾರಿ ಇಕ್ಬಾಲ್, ಲೆಕ್ಕ ಪರಿಶೋಧಕ ಅಝೀಝ್, ಸದಸ್ಯರಾದ ಬಶೀರ್ ತಂಡೇಲ್, ಹೈದರ್, ಅಕ್ತರ್ ಹುಸೈನ್, ರಝಾಕ್, ಝುಬೇರ್, ಶೆರೀಫ್, ಶಾಕಿರ್, ಪರ್ವೀಝ್, ಜಮಾಲ್, ಹನೀಫ್, ಇಬ್ರಾಹಿಂ ಉಪಸ್ಥಿತರಿದ್ದರು.
Next Story