ಬದುಕಿನಲ್ಲಿ ಉನ್ನತ ಗುರಿಗಳನ್ನು ಕಟ್ಟಿಕೊಳ್ಳಿ: ಶೋಭಾ ನರೇಶ್

ಮಂಗಳೂರು : ಶಾಲಾ ಆಟ, ಪಾಠಗಳ ಜೊತೆ ಶಿಸ್ತು, ಸಂಯಮ, ಉತ್ತಮ ನಡವಳಿಕೆ, ಭವಿಷ್ಯದ ಭದ್ರವಾದ ಗುರಿಗಳನ್ನು ಕಟ್ಟಿಕೊಂಡು ಶಾಲೆಯಲ್ಲಿ ಕಲಿಯಬೇಕು ಮತ್ತು ಇದಕ್ಕೆ ಸೂಕ್ತವಾದ ಮಾಹಿತಿ ಗಳನ್ನು ಶಿಕ್ಷಕರಿಂದ, ಪೋಷಕರಿಂದ ಪಡೆಯಬೇಕು ಎಂದು ನಾ. ಡಿಸೋಜ ರವರ ಪುತ್ರಿ ಶೋಭಾ ನರೇಶ್ ಹೇಳಿದರು.
ನಾಡಿನ ಖ್ಯಾತ ಸಾಹಿತಿಗಳಾದ ನಾ. ಡಿಸೋಜ ರವರ ಹುಟ್ಟುಹಬ್ಬದ ಪ್ರಯುಕ್ತ ಮಂಗಳೂರಿನ ಮಣ್ಣಗುಡ್ಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನಾ. ಡಿಸೋಜ ರವರ ಪಾಠದ ಜಿಂಕೆಯ ಪಾತ್ರವನ್ನು ವಿವರಿಸಿದರು.
ಕಲಾವಿದ ದಿನೇಶ್ ಹೊಳ್ಳ ಜಿಂಕೆಗಳು ಜೀವ ವೈವಿದ್ಯದ ಸಂಕಲೆಯಲ್ಲಿ ವಹಿಸುವ ಪಾತ್ರವನ್ನು ವಿವರಿಸಿ ಜಿಂಕೆಯ ಮುಖವಾಡ ಮಾಡುವ ವಿಧಾನವನ್ನು ಹೇಳಿ ಕೊಟ್ಟರು. ಶಾಲಾ ಅದ್ಯಾಪಕ ಗಣೇಶ್ ಕುಮಾರ್, ಛಾಯಾಚಿತ್ರಕಾರ, ಕವಿ ಚಂದ್ರಹಾಸ ಕೋಟೆಕಾರ್, ಶಿಕ್ಷಕಿ ಲಾವಣ್ಯ, ಬಿಂದು ಮಲ್ಯ ಉಪಸ್ಥಿತರಿದ್ದರು.
Next Story