ಅಶ್ರಫ್ ಕಿನಾರ ವಿರುದ್ಧ ಪ್ರಕರಣ ದಾಖಲು: ಎಸ್ ವೈ ಎಸ್ ಖಂಡನೆ

ಅಶ್ರಫ್ ಕಿನಾರ
ಮಂಗಳೂರು: ಸಮಾಜ ಸೇವಕ, ಸುನ್ನೀ ಸಂಘಟನೆಗಳ ಕಾರ್ಯಕರ್ತರೂ ಆದ ವಕ್ಫ್ ಸಲಹಾ ಮಂಡಳಿಯ ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಕಿನಾರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಖಂಡಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಬಂದ ಆಕ್ಷೇಪಾರ್ಹವಾದ ಅಂಶಗಳೇನೂ ಇಲ್ಲದ ಸಂದೇಶವೊಂದನ್ನು ರವಾನಿಸಿದ ಕಾರಣಕ್ಕೆ ದೂರು ದಾಖಲಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಕೂಡಲೇ ಕೇಸು ಹಿಂಪಡೆಯಬೇಕು. ಸಾಮಾಜಿಕ ಮಾಧ್ಯಮಗಳಲ್ಲೂ, ಬಹಿರಂಗ ಭಾಷಣಗಳಲ್ಲೂ ಧರ್ಮ ಧರ್ಮಗಳ ನಡುವೆ ಕಿಚ್ಚು ಹಚ್ಚುವ ಪ್ರಚೋದನಕಾರರ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸರು ಮತ್ತು ಸರ್ಕಾರ ಮುಂದಾಗಬೇಕು ಎಂದು ಎಸ್ ವೈ ಎಸ್ ಪ್ರಕಟಣೆಯಲ್ಲಿ ಒತ್ತಾಯಿಸಿದೆ.
Next Story





