ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕಿನಾರ ವಿರುದ್ಧ ಪ್ರಕರಣ ಹಿಂಪಡೆಯಲು ಆಗ್ರಹ

ಮಂಗಳೂರು: ಕರ್ನಾಟಕ ರಾಜ್ಯ ಜಮಾತ್‌ನ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕಿನಾರ ವಿರುದ್ಧ ದಾಖಲಾಗಿರುವ ಕೇಸ್‌ನ್ನು ಹಿಂಪಡೆಯುವಂತೆ ದ.ಕ. ಜಿಲ್ಲಾ ಮುಸ್ಲಿಮ್‌ಲೀಗ್ ಪದಾಧಿಕಾರಿಗಳಾದ ಮುಹಮ್ಮದ್ ಇಸ್ಮಾಯಿಲ್ ಹಾಗೂ ರಿಯಾಝ್ ಹರೇಕಳ ಆಗ್ರಹಿಸಿದ್ದಾರೆ.
ಇಸ್ಲಾಮ್ ಧರ್ಮದ ಧಾರ್ಮಿಕ ವಿಧಿಯಾದ ಕುರ್ಬಾನಿ ಬಗ್ಗೆ ಸರಕಾರದ ವಿರೋಧಿ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದಕ್ಕಾಗಿ ಅವರ ವಿರುದ್ಧ ದೂರು ದಾಖಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರದ ‘ರಾಜ್ಯದಲ್ಲಿ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವುದು ಮತ್ತು ಧಾರ್ಮಿಕ ಆಚರಣೆಗಳಿಗೆ ಪೂರ್ಣ ಸಹಕಾರ’ಎಂಬ ಭರವಸೆಯು ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿದ್ದು, ಪವಿತ್ರ ಬಕ್ರೀದ್ ಗೆ ಅಕ್ರಮ ಜಾನುವಾರು ಸಾಗಾಟ ಎಂಬ ನೆಪವೊಡ್ಡಿ ನ್ಯಾಯಬದ್ಧ ಕುರ್ಬಾನಿ ಜಾನುವಾರು ಸಾಗಾಟಗಳಿಗೆ ತಡೆಯುಂಟು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Next Story