ಶ್ರೀ ಕ್ಷೇತ್ರ ಕದ್ರಿಯಲ್ಲಿ ಲೋಕ ಕಲ್ಯಾಣಾರ್ಥ ಸಾಮೂಹಿಕ ಪ್ರಾರ್ಥನೆ, ಸೀಯಾಳ ಅಭಿಷೇಕ

ಮಂಗಳೂರು: ಲೋಕ ಕಲ್ಯಾಣಾರ್ಥವಾಗಿ ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಸೀಯಾಳ ಅಭಿಷೇಕ ಸೋಮವಾರ ಬೆಳಗ್ಗೆ ನಡೆಯಿತು.
ಸಂಸದ ಬ್ರಿಜೇಶ್ ಚೌಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಜೆ ಶೆಟ್ಟಿ , ಸದಸ್ಯರಾದ ಕಿರಣ್ ಕುಮಾರ್ ಕೊಡಿಯಾಲ್ ಬೈಲ್, ಪ್ರೀತಾ ನಂದನ್ ಕದ್ರಿ, ಉಷಾ ಪ್ರಭಾಕರ್ ಮೇರಿಹಿಲ್, ದಿಲ್ ರಾಜ್ ಆಳ್ವ ಮಂಗಳಾ ದೇವಿ, ಹರಿನಾಥ ಜೋಗಿ ಕಾವೂರು, ರಾಜೇಂದ್ರ ಚಿಲಿಂಬಿ, ನಾರಾಯಣ ಕೋಟ್ಯಾನ್ ಹೊಯ್ಗೆಬಜಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ್ ಮೊಯ್ಲಿ ಕುಡುಪು, ವಿಶ್ವಹಿಂದು ಪರಿಷತ್ತಿನ ಎಚ್.ಕೆ ಪುರುಷೋತ್ತಮ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಡಾ. ವಾಮನ ಶೆಣೈ , ಜಿಲ್ಲಾಧಾರ್ಮಿಕ ಪರಿಷತ್ ಸದಸ್ಯೆ ಚಂದ್ರಕಲಾ ದೀಪಕ್ ರಾವ್, ಜೋಗಿ ಸಮಾಜದ ಅಧ್ಯಕ್ಷ ಕಿರಣ್ ಕುಮಾರ್, ರಾಮಕೃಷ್ಣ ರಾವ್, ಮಾಜಿ ಕಾರ್ಪರೇಟರ್ ಮನೋಹರ ಶೆಟ್ಟಿ, ಶಕಿಲಾ ಕಾವ,ಉದ್ಯಮಿ ರತ್ನಾಕರ ಜೈನ್, ಸುಂದರ ಶೆಟ್ಟಿ, ಕರುಣಾಕರನ್, ರವೀಂದ್ರ ಶೆಟ್ಟಿ, ಪ್ರಭಾಕರ ಶರ್ಮ, ರಾಮ ಹೊಳ್ಳ,ಗೀತಾ ಸರಳಾಯ, ಪೂರ್ಣಿಮಾ ಪೇಜಾವರ, ಸುಮಾ ಪ್ರಸಾದ್, ಎಂ.ಬಿ ಪುರಾಣಿಕ್ ಸಹಿತ ಅನೇಕ ಗಣ್ಯರು, ಹತ್ತು ಸಮಸ್ತರು ಉಪಸ್ಥಿತರಿದ್ದರು.
ದೇವಳದ ಅರ್ಚಕರಾದ ಡಾ.ಪ್ರಭಾಕರ ಅಡಿಗರಿಂದ ದೇವತಾ ಪ್ರಾರ್ಥನೆ, ವಿದ್ವಾನ್ ರಾಘವೇಂದ್ರ ಭಟ್, ವೇ.ಮೂ. ರವಿ ಅಡಿಗ, ರಾಘವೇಂದ್ರ ಅಡಿಗರಿಂದ ಏಕಾದಶ ರುದ್ರಾಭಿಷೇಕ ಮೂಲಕ ಸೀಯಾಳಾ ಭಿಷೇಕ ನೆರವೇರಿತು.
ಕಾರ್ಯಕ್ರಮ ಸಂಯೋಜಿಸಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುಧಾಕರ ರಾವ್ ಪೇಜಾವರ ವಂದಿಸಿದರು.