‘ಬ್ಯಾರಿ ಲೆಜೆಂಡ್’ ಪೇಜ್ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಫೋಟೋ ಹಾಕಿ ದ್ವೇಷ ಭಾವನೆ ಬರುವಂತೆ ಪೋಸ್ಟ್ ಹಾಕಿದ್ದ ‘ಬ್ಯಾರಿ ಲೆಜೆಂಡ್’ ಎಂಬ ಪೇಜ್ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶರಣ್ ಪಂಪ್‌ವೆಲ್‌ನ ಫೋಟೋ ಹಾಕಿ ಅದರ ಮೇಲೆ ‘ಮಂಗಳೂರನ್ನು ಗುಜರಾತ್, ಮಣಿಪುರದಂತೆ ಸುಟ್ಟು ಬೂದಿ ಮಾಡುವ ಯತ್ನವಾಗಿರಬಹುದೇ.....! ಇಂತಹ ಕೋಮು ದ್ವೇಷಿಗಳಿಗೆ ಪರೋಕ್ಷ ಬೆಂಬಲ ನೀಡಿ ಶರಣ್ ಪಂಪ್‌ವೆಲ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸುವಂತಿಲ್ಲ, ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್’ ಎನ್ನುವ ಬರಹವನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ಠಾಣೆಯಲ್ಲಿ ಸಾಮಾಜಿಕ ಜಾಲತಾಣ ಪರಿಶೀಲನೆ ಮಾಡುವ ಪೊಲೀಸ್ ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ.
Next Story