ವಿಟ್ಲ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ಅಪಾಯದಲ್ಲಿ: ಅರ್ಧದಲ್ಲಿ ಕಾಮಗಾರಿ ನಿಲ್ಲಿಸಿದ ಗುತ್ತಿಗೆದಾರರು
ವಿಟ್ಲ: ವಿಟ್ಲ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ತಡೆಗೋಡೆ ಕಾಮಗಾರಿ ಅರ್ಧದಲ್ಲೇ ನಿಲ್ಲಿಸಿರುವುದರಿಂದ ಇಲ್ಲಿನ ಟಾಟಾ ವರ್ಕ್ ಶಾಪ್ ಕಟ್ಟಡ ಅಪಾಯ ದಲ್ಲಿದೆ. ಕಟ್ಟಡದ ಪಕ್ಕದಲ್ಲಿ ಮಣ್ಣನ್ನು ಅಗೆದು ಅರ್ಧದಲ್ಲಿ ಕಾಮಗಾರಿ ನಿಲ್ಲಿಸಿ ತೆರಳಿದ ಗುತ್ತಿಗೆದಾರರ ಕೆಲಸದಿಂದ ಅಪಾಯ ಎದುರಾಗಿದೆ.
ವಿಟ್ಲ ಕಸಬಾ ಗ್ರಾಮದ ಸುರುಳಿಮೂಲೆ ಗುಡ್ಡದಲ್ಲಿ ಐಟಿಐ ಇದೆ. ಇಲ್ಲಿ ಎರಡು ಕಟ್ಟಡಗಳಿವೆ. ಒಂದು ಕಟ್ಟಡ ಕೆಳಗಿದ್ದರೆ ಬಾಟಾ ವರ್ಕ್ ಶಾಪ್ ಎತ್ತರದಲ್ಲಿದೆ. ಮೇಲಿನ ಕಟ್ಟಡ ಆಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ತಡೆಗೋಡೆ ನಿರ್ಮಿಸುವ ಮತ್ತು ಸಂಪರ್ಕ ರಸ್ತೆ ನಿರ್ಮಿಸುವ ಕಾಮಗಾರಿಗೆ ಒಂದು ಕೋಟಿ ರೂ. ಅನುದಾನ ಮಂಜೂರಾಗಿದೆ. ಇದರಲ್ಲಿ 40 ಲಕ್ಷ ಬಿಡುಗಡೆಯಾಗಿದೆ.
ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರವು ರಸ್ತೆಗೆ ಕಾಂಕ್ರೀಟ್ ಹಾಕುವ ಕಾಮಗಾರಿಯನ್ನು 2025 ರಲ್ಲಿ ಸ್ಥಗಿತಗೊ ಳಿಸಿದೆ. ಮಳೆ ಸುರಿಯುತ್ತಿರುವಾಗಲೇ ಟಾಟಾ ವರ್ಕ್ ಶಾಪ್ ಕಟ್ಟಡದ ಮುಂಭಾಗದ ಮಣ್ಣನ್ನು ಜೆಸಿಬಿ ಯಲ್ಲಿ ತೆಗೆಸಿದ್ದಾರೆ. ಇದರಲ್ಲಿ 200 ವಿದ್ಯಾರ್ಥಿಗಳು ಮತ್ತು 30 ಕೋಟಿ ರೂ ಬೆಲೆಬಾಳುವ ಉತ್ಕೃಷ್ಟ ಯಂತ್ರೋಪಕರಣಗಳಿದೆ. ಈ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.
ರಕ್ಷಣೆಗಾಗಿ ತಡೆಗೋಡೆ ಮಾಡಿ ಸುಭದ್ರಗೊಳಿಸಬೇಕಾಗಿದ್ದ ಗುತ್ತಿಗೆದಾರರು ಅದನ್ನು ಮರೆತು ಜನರಲ್ಲಿ ಭಯ ಮೂಡುವಂತೆ ಮಾಡಿದ್ದಾರೆ. ಮುಂದೆ ಸಂಭವಿಸಬಹುದಾದ ಅಪಾಯದ ಬಗ್ಗೆ ಗುತ್ತಿಗೆದಾರರು ಎಚ್ಚರವಹಿಸಬೇಕಾಗಿತ್ತು. ಬದಲಾಗಿ ಅವೈಜ್ಞಾನಿಕ ಮತ್ತು ಬೇಜವಾಬ್ದಾರಿ ಕಾಮಗಾರಿ ಮಾಡಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಮಣ್ಣು ಆಗದ ಜಾಗದಲ್ಲಿ ಅಲ್ಲಲ್ಲಿ ನೀರಿನ ಒರತೆ ಕಾಣುತ್ತಿದೆ. ಮಳೆ ಜೋರಾದರೆ ಕಟ್ಟಡಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ತಡೆಗೋಡೆ ಕಾಮಗಾರಿ ತತ್ ಕ್ಷಣ ಕೈಗೆತ್ತಿಕೊಳ್ಳಬೇಕು. ಕಾಮಗಾರಿಯನ್ನು ಕೂಡಲೇ ಮುಂದುವರಿಸ ಬೇಕು. ವಿದ್ಯಾರ್ಥಿಗಳಿಗೆ ಸುಭದ್ರವಾಗಿಸಲು ಕ್ರಮಕೈಗೊಳ್ಳ ಎಂದು ವಿದ್ಯಾರ್ಥಿಗಳ ಹೆತ್ತವರು ಆಗ್ರಹಿಸಿದ್ದಾರೆ.







