ಎಂಸಿಸಿ ಬ್ಯಾಂಕ್‌ನ ವಾರ್ಷಿಕ ಪ್ರಗತಿ ಪರಿಶೀಲನೆ, ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರು: ಕೆಥೋಲಿಕ್ ಕೋ ಅಪರೇಟಿವ್ (ಎಂಸಿಸಿ) ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಬ್ಯಾಂಕಿನ ಪಿಎಫ್‌ಎಕ್ಸ್ ಸಲ್ದಾನ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಧರ್ಮ ಪ್ರಾಂತ್ಯದ ರೊಸಾರಿಯೊ ಚರ್ಚ್‌ನ ರೆಕ್ಟರ್ ಹಾಗೂ ಪ್ರಧಾನ ಧರ್ಮಗುರು ವಂ. ವಲೇರಿಯನ್ ಡಿ ಸೋಜ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕೆನರಾ ಬ್ಯಾಂಕಿನ ಮಾಜಿ ಜನರಲ್ ಮ್ಯಾನೇಜರ್ ಬಾಲಚಂದ್ರ ರಾವ್, ಎನ್‌ಐಟಿಕೆ ಸುರತ್ಕಲ್‌ನ ಮಾಜಿ ಪ್ರಾಧ್ಯಾಪಕ ಮತ್ತು ಡೀನ್ ಡಾ.ಅಲೋಶಿಯಸ್ ಸಿಕ್ವೇರಾ ಮತ್ತು ಪದುವಾ ಕಾಲೇಜು ಪ್ರಾಂಶುಪಾಲ ವಂ. ಅರುಣ್ ಲೋಬೊ ಮುಖ್ಯ ಅತಿಥಿಗಳಾಗಿದ್ದರು.
ಬ್ಯಾಂಕಿನ ಸಲಹೆಗಾರ ಎಸ್. ಎಚ್. ವಿಶ್ವೇಶ್ವರಯ್ಯ ಬ್ಯಾಂಕಿನ 2024-25ನೇ ಸಾಲಿನ ಕಾರ್ಯ ಕ್ಷಮತೆಯ ವಿಮರ್ಶೆಯನ್ನು ನಡೆಸಿಕೊಟ್ಟರು.
30 ವರ್ಷಗಳ ಸೇವೆಯ ನಂತರ ನಿವೃತ್ತರಾದ ಬ್ಯಾಂಕಿನ ಸಿಬ್ಬಂದಿ ರಾಬರ್ಟ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು. ವೃತ್ತಿಪರ ನಿರ್ದೇಶಕ ಸುಶಾಂತ್ ಸಲ್ಡಾನಾ, ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲಿ ಸಾಧನೆಗೈದ ಸಿಬ್ಬಂದಿ ಮತ್ತು ನಿದೇಶಕರ ಮಕ್ಕಳನ್ನು ಸನ್ಮಾನಿಸಲಾಯಿತು. ಜನರಲ್ ಮ್ಯಾನೇಜರ್ ಸುನಿಲ್ ಮೆನೆಜಸ್ ಮ್ಯಾನೇಜರ್ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಿದರು. 2024-25ನೇ ವಿತ್ತೀಯ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದ ಶಾಖೆ ಮತ್ತು ಅತ್ಯಧಿಕ ವಹಿವಾಟು ಸಾಧಿಸಿದ ಶಾಖೆಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.
ಗೂಗಲ್‌ನಲ್ಲಿ ಪೈವ್ ಸ್ಟಾರ್ ರೇಟಿಂಗ್ ಪಡೆದ ಶಾಖೆಗಳಾದ ಕುಲಶೇಖರ, ಮೊರ್ಗನ್ಸ್‌ಗೇಟ್, ಮೂಡುಬಿದಿರೆ, ಶಿರ್ವಾ ಮತ್ತು ಉಳ್ಳಾಲ ಶಾಖೆಗಳು ಪಡೆದುಕೊಂಡವು.
ಬೆಳ್ತಂಗಡಿ, ಬಜ್ಪೆ, ಕುಲಶೇಖರ್ ಮತ್ತು ಮಾರ್ಗನ್ಸ್‌ಗೇಟ್ ಶಾಖೆಗಳು ಸಾಮಾಜಿಕ ಮಾಧ್ಯಮ ಗುರಿ ಸಾಧನೆ ಪ್ರಶಸ್ತಿಯನ್ನು, ಶಾಖೆಯ ಸ್ಥಾಪನೆಯ ಒಂದು ವರ್ಷದಲ್ಲಿ ಮೈಲಿಗಲ್ಲು ಸಾಧನೆ ಪ್ರಶಸ್ತಿಯನ್ನು ಬ್ರಹ್ಮಾವರ, ಬಜ್ಪೆ ಶಾಖೆಯು ಅತ್ಯುತ್ತಮ ವ್ಯವಹಾರ ದಾಖಲಿಸಿದ ಶಾಖೆ ಪ್ರಶಸ್ತಿಯನ್ನು ಪಡೆದು ಕೊಂಡವು . 2024-25ನೇ ವಿತ್ತೀಯ ವರ್ಷದಲ್ಲಿ ಅತಿ ಹೆಚ್ಚು ವಹಿವಾಟು ನಡೆಸಿದ ಶಾಖೆ ಪ್ರಶಸ್ತಿಯನ್ನು ಕುಲಶೇಖರ ಶಾಖೆಯು ಪಡೆದುಕೊಂಡಿತು.
ಉಪಾಧ್ಯಕ್ಷ ಜೂಡ್ ಜೆರಾಲ್ಡ್ ಡಿ ಸಿಲ್ವಾ, ನಿರ್ದೇಶಕರಾದ ಜೋಸೆಫ್ ಅನಿಲ್ ಪತ್ರಾವೊ, ಎಲ್ರಾಯ್ ಕ್ರಾಸ್ಟೊ, ಆಂಡ್ರ್ಯೂ ಡಿ ಸೋಜ, ಡೇವಿಡ್ ಡಿ ಸೋಜ, ಹೆರಾಲ್ಡ್ ಮೊಂತೇರೊ, ರೋಶನ್ ಡಿ ಸೋಜ, ಮೆಲ್ವಿನ್ ವಾಸ್, ಡಾ ಫ್ರೀಡಾ ಎಫ್. ಡಿ ಸೋಜ , ಐರಿನ್ ರೆಬೆಲ್ಲೊ, ಡಾ ಜೆರಾಲ್ಡ್ ಪಿಂಟೊ, ವಿನ್ಸೆಂಟ್ ಲಸ್ರಾದೊ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೋ, ಸುಶಾಂತ್ ಸಲ್ಡಾನಾ, ಆಡಳಿತ ಮಂಡಳಿ ಸದಸ್ಯರಾದ ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿ ಕ್ರೂಜ್ ಮತ್ತು ಆಲ್ವಿನ್ ಮೊಂತೇರೊ ಉಪಸ್ಥಿತರಿದ್ದರು.
ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಎಫ್. ಮಿನೇಜಸ್ ವಂದಿಸಿದರು ಮತ್ತು ಹಿರಿಯ ವ್ಯವಸ್ಥಾಪಕ ಡೆರಿಲ್ ಲಸ್ರಾದೊ ಕಾರ್ಯಕ್ರಮ ನಿರೂಪಿಸಿದರು.







