ಜೋಕಟ್ಟೆ- ಪಡೀಲು ರೈಲು ಹಳಿ ದುರಸ್ತಿ ಪೂರ್ಣ

ಮಂಗಳೂರು, ಜೂ.15: ನಿರಂತರ ಮಳೆಯಿಂದ ನಗರ ಹೊರವಲಯದ ಪಡೀಲ್ ಮತ್ತು ಜೋಕಟ್ಟೆ ನಡುವೆ ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಹಳಿಯಲ್ಲಿ ನಡೆಯುತ್ತಿದ್ದ ದುರಸ್ತಿ ಕಾಮಗಾರಿ ರವಿವಾರ ಸಂಜೆ ಆರು ಗಂಟೆಗೆ ಪೂರ್ಣಗೊಂಡಿದೆ.
ಶನಿವಾರ ಭೂಕುಸಿತ ಸಂಭವಿಸಿದ ಒಂದು ತಾಸಿನಲ್ಲಿಯೇ ಒಂದು ಹಳಿಯನ್ನು ರೈಲು ಸೇವೆಗೆ ಸಜ್ಜುಗೊಳಿ ಸಲಾಗಿತ್ತು. ಇನ್ನೊಂದು ಹಳಿಯಲ್ಲಿ ನಡೆಯುತ್ತಿದ್ದ ದುರಸ್ತಿ ಕಾಮಗಾರಿ ಇಂದು ಮುಕ್ತಾಯಗೊಂಡಿದೆ.
ಭೂ ಕುಸಿತ ಸಂಭಿವಿಸಿದ ಬಳಿಕ ಈ ಮಾರ್ಗದಲ್ಲಿ ರೈಲುಗಳು ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ಸಂಚರಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
Next Story





