ಪಾಲ್ದನೆ ಚರ್ಚ್: ಐಸಿವೈಎಂ ಘಟಕದ ನೂತನ ಪದಾಧಿಕಾರಿಗಳ ಪ್ರಮಾಣ ವಚನ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ಐಸಿವೈಎಂ ಘಟಕದ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಜೂನ್ ರವಿವಾರ ಬೆಳಗ್ಗೆ ಬಲಿಪೂಜೆಯ ಬಳಿಕ ನೆರವೇರಿತು. ಚರ್ಚಿನ ಧರ್ಮಗುರು ವಂ. ಫಾ. ಆಲ್ಬನ್ ಡಿ ಸೋಜ ಅವರು ಪ್ರಮಾಣ ವಚನ ಬೋಧಿಸಿದರು.
ಸಂಘದ ಅಧ್ಯಕ್ಷೆ ವಿನೀಶಾ ಬ್ರ್ಯಾಗ್ಸ್, ಉಪಾಧ್ಯಕ್ಷ ರಾಯನ್ ನೊರೊನ್ಹಾ, ಕಾರ್ಯದರ್ಶಿ ಆಶೆಲ್ ಲೋಬೊ, ಜತೆ ಕಾರ್ಯದರ್ಶಿ ಡ್ಯಾರನ್ ಅರಾನ್ಹಾ, ಖಜಾಂಚಿ ಗ್ಲೇವಿನ್ ಡಿ ಸೋಜ, ‘ಆಮ್ಚೊ ಯುವಕ್’ ಇದರ ಪ್ರತಿನಿಧಿ ವಿನೊಲಾ ಪಿಂಟೊ, ರೆಡ್ ಡ್ರೊಪ್ ಪ್ರತಿನಿಧಿ ಬ್ರೆಂಡನ್ ಪಿರೇರಾ, ಆಧ್ಯಾತ್ಮಿಕ ಕಾರ್ಯದರ್ಶಿ ಫ್ರೀಡಲ್ ಡಿ ಸೋಜ , ಕ್ರೀಡಾ ಕಾರ್ಯದರ್ಶಿ ಡಿಯೋನ್ ಫೆನಾರ್ಂಡಿಸ್, ನಿಕಟ ಪೂರ್ವ ಅಧ್ಯಕ್ಷ ವಿಲ್‌ಸನ್ ಪಿಂಟೊ ಅವರು ಪ್ರಮಾಣವಚನ ಸ್ವೀಕರಿಸಿದರು.
ಸಂಘದ ಸಚೇತಕ ಹಾಗೂ ಮದರ್ ತೆರೆಸಾ ವಾರ್ಡ್‌ನ ಮುಖ್ಯಸ್ಥ ರೋಶನ್ ಮೊಂತೇರೊ ಉಪಸ್ಥಿತರಿದ್ದರು.
Next Story





