ಪಾಲ್ದನೆ ಚರ್ಚ್: ಫಾ. ಆಲ್ಬನ್ ಡಿಸೋಜರಿಗೆ ವಿದಾಯ ಸಮಾರಂಭ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ಧರ್ಮಗುರು ವ. ಫಾ. ಆಲ್ಬನ್ ಡಿ ಸೋಜ ಅವರು ನಿವೃತ್ತರಾಗುವ ಪ್ರಯುಕ್ತ ಚರ್ಚ್ ವತಿಯಿಂದ ವಿದಾಯ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಬೆಳಗ್ಗೆ ಬಲಿ ಪೂಜೆಯ ನೇತೃತ್ವ ವಹಿಸಿದ್ದ ಫಾ. ಆಲ್ಬನ್ ಡಿ ಸೋಜ ಕಳೆದ 6 ವರ್ಷಗಳ ಅವಧಿಯಲ್ಲಿ ಚರ್ಚಿನ ಏಳಿಗೆಗಾಗಿ ಶ್ರಮಿಸಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಬಲಿ ಪೂಜೆಯ ಸಂದರ್ಭದಲ್ಲಿ ಕಪುಚಿನ್ ಸಂಸ್ಥೆಯ ವಂ. ಫಾ. ಡೆರಿಲ್ ಫೆನಾರ್ಂಡಿಸ್ ಅವರು ಪ್ರವಚನ ನೀಡಿದರು. ಬಳಿಕ ನಡೆದ ವಿದಾಯ ಸಮಾರಂಭದಲ್ಲಿ ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆನಾರ್ಂಡಿಸ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಆಸ್ಟಿನ್ ಮೊಂತೇರೊ , ಸರ್ವ ಆಯೋಗಗಳ ಸಂಚಾಲಕ ಜೊಸ್ಲಿನ್ ಲೋಬೊ , ಫಾ. ಡೆರಿಲ್ ಫೆನಾರ್ಂಡಿಸ್ ಗೌರವಿಸಿದರು.
ರಿಶಾಲ್ ಡಿ ಸೋಜ ಕಾರ್ಯಕ್ರಮ ನಿರ್ವಹಿಸಿದರು. ಪ್ರೆಸಿಲ್ಲಾ ಫೆನಾರ್ಂಡಿಸ್ ಸಹಕರಿಸಿದರು.
Next Story





