ಆಲೆಟ್ಟಿಯ - ಕೂರ್ನಡ್ಕ ಸಂಪರ್ಕ ಸೇತುವೆ ಮುಳುಗಡೆ

ಸುಳ್ಯ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಆಲೆಟ್ಟಿಯ ಕೂರ್ನಡ್ಕ ಎಂಬಲ್ಲಿ ಸಂಪರ್ಕ ಸೇತುವೆ ಮುಳುಗಡೆಯಾಗಿದೆ.
ಆಲೆಟ್ಟಿಯ ಕೂರ್ನಡ್ಕ ಗಡಿ ಭಾಗದಲ್ಲಿ ಸಂಪರ್ಕದ ಸೇತುವೆ ವಷರ್ಂಪ್ರತಿ ಮುಳುಗಡೆಯಾಗುತ್ತಿದ್ದು ಇದೀಗ ಶನಿವಾರದಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಮತ್ತೇ ಈ ಬಾರಿಯು ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಬಡ್ಡಡ್ಕದಿಂದ ಕೂರ್ನಡ್ಕ ಗಡಿ ಪ್ರದೇಶದಲ್ಲಿ ಪೆರಾಜೆ ಕಮ್ಮಾಡಿ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ವಷರ್ಂಪ್ರತಿ ಮಳೆಗಾಲದಲ್ಲಿ ಮುಳುಗಡೆಯಾಗುವುದರಿಂದ ಮಳೆಗಾಲದಲ್ಲಿ ಈ ಭಾಗದ ಸಾರ್ವಜನಿಕರು ನಿರಂತರ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಕಳೆದ ಬಾರಿ ಮಳೆಗಾಲದಲ್ಲಿ ಸೇತುವೆ ಮುಳುಗಡೆಯಾದ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಇಲಾಖೆಯ ಅಧಿಕಾರಿ ಗಳಿಗೆ ನೂತನ ಸೇತುವೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಮನವಿ ನೀಡಿದರೂ ಪ್ರಯೋಜನ ಇಲ್ಲದಂತಾಗಿದೆ.
Next Story





