ಕರಿಯ ಅವರಿಗೆ ರಾಜ್ಯ ಪ್ರಶಸ್ತಿ| ಪ್ರಾಮಾಣಿಕ ಸೇವೆಗೆ ಸಂದ ಗೌರವ: ಮುನೀರ್ ಕಾಟಿಪಳ್ಳ
ಡಾ. ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿ ವಿಜೇತ ಕರಿಯಗೆ ಅಭಿನಂದನಾ ಸಮಾರಂಭ

ಮಂಗಳೂರು: ಕೊರಗ ಸಮುದಾಯದ ಕರಿಯ ಕೆ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಅದೂ ಯಾವ ಲಾಬಿಗಳನ್ನು ಮಾಡದೆ ಅವರು ಸಮುದಾಯಕ್ಕೆ ಮಾಡಿದ ಸೇವೆಗೆ ಸಂದ ಅರ್ಹ ಗೌರವ ಎಂದು ಸಿಪಿಐ(ಎಂ) ದ.ಕ. ಜಿಲ್ಲೆ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅಭಿನಂದಿಸಿದರು.
ಕರ್ನಾಟಕ ಸರಕಾರವು ವಾರ್ಷಿಕವಾಗಿ ಕೊಡಮಾಡುವ 2025ನೇ ಸಾಲಿನ ಪ್ರತಿಷ್ಠಿತ ಡಾ. ಬಾಬು ಜಗ ಜೀವನ್ ರಾಮ್ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಜಿಲ್ಲಾ ಸಮಿತಿಯ ಸದಸ್ಯ ಕರಿಯ ಕೆ.ರವರಿಗೆ ಸಹೋದಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿ ಕೊಂಡ ಅಭಿನಂದನಾ ಕಾರ್ಯ ಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸರಕಾರ ಅರ್ಹರನ್ನು ಗುರುತಿಸಿ ಗೌರವಿಸಿದೆ. ಈ ಪ್ರಶಸ್ತಿ ಬಂದಾಗ ಪ್ಲೆಕ್ಸ್ ,ಬ್ಯಾನರ್ ಗದ್ದಲಗಳಿಲ್ಲದೆ ನಿರ್ಲಿಪ್ತರಾಗಿ ತಮ್ಮ ಸಮುದಾ ಯದ ಸೇವಾ ಕಾರ್ಯದಿಂದ ವಿಮುಖ ರಾಗದೆ ಇರುವ ವ್ಯಕ್ತಿತ್ವ ಕರಿಯಣ್ಣನ ವರದ್ದಾಗಿದೆ. ಜಿಲ್ಲೆಯಲ್ಲಿಯೂ ಕರ್ನಾಟಕ ಸರಕಾರದ ಅಷ್ಟೊಂದು ಮಹತ್ವದ ಪ್ರಶಸ್ತಿ ದೊರೆತರೂ ಅವರನ್ನು ಪ್ರಶಸ್ತಿ ಬಂದ ಬಳಿಕ ಅವರಿಗೆ ಹೆಚ್ಚು ಪ್ರಚಾರ ದೊರೆತ್ತಿಲ್ಲ. ಕರಿಯಣ್ಣ ಅದರ ಹಿಂದೆ ಹೋದವರಲ್ಲ. ಕರಿಯ ಕೆ. ಇವರು ಆದಿವಾಸಿ ಕೊರಗ ಸಮುದಾಯದ ಹಿರಿಯರಾಗಿದ್ದಾರೆ. ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿರುತ್ತಾರೆ. ವಾಮಂಜೂರು ಶ್ರೀ ಕೊರಗಜ್ಜ ಸೇವಾ ಟ್ರಸ್ಟ್ ಇದರ ಪದಾಧಿಕಾರಿ ಯಾಗಿದ್ದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ವಾಮಂಜೂರು ಘಟಕದ ಅಧ್ಯಕ್ಷರಾಗಿದ್ದಾರೆ. ಪೌರ ಕಾರ್ಮಿಕರ ಹಕ್ಕು ಮತ್ತು ಸೇವಾಭದ್ರತೆ ಸೌಲಭ್ಯ ಕ್ಕಾಗಿ ನಿರಂತರ ಹೋರಾಟ ಗಾರರಾಗಿದ್ದು ಸಮುದಾಯದ ನಾಯಕರಾಗಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಅಭಿನಂದಿಸಿದರು.
ಮುಖ್ಯ ಅತಿಥಿ ವಾಸುದೇವ ಉಚ್ಚಿಲ್ ರವರು ಮಾತನಾಡುತ್ತಾ,ತುಳು ನಾಡಿನ ಮೂಲ ಸಮುದಾಯ ಕೊರಗರು ಎಂಬುವುದನ್ನು ಸಾಕಷ್ಟು ತಜ್ಞರು ಅಭಿಪ್ರಾಯ ಪಡುತ್ತಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆ ಗಳಿಗೂ ಮೂಲ ದ್ರಾವಿಡ ಭಾಷೆ.ತುಳು ಭಾಷೆ ,ಕೊರಗ ಭಾಷೆ ಮೂಲ ದ್ರಾವಿಡ ಭಾಷೆಗಳಲ್ಲಿ ಸ್ಥಾನ ಪಡೆದಿದೆ. ಇಂತಹ ಸಮುದಾಯದ ಜನಸಂಖ್ಯೆ ಇಳಿಮುಖವಾಗುತ್ತಿರುವುದು ನೋವಿನ ಸಂಗತಿ ಇಂತಹ ಸಮುದಾಯದ ವ್ಯಕ್ತಿಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಬಾಬು ಜಗಜೀವನ್ ರಾಮ್ ಪ್ರಶಸ್ತಿ ಲಭಿಸಿರು ವುದು ಅತ್ಯಂತ ಮಹತ್ವದ ಸಂಗತಿಯಾಗಿದೆ ಅವರಿಗೆ ಇನ್ನಷ್ಟು ಗೌರವ ಮಾಧ್ಯಮಗಳಲ್ಲಿ ಜಿಲ್ಲೆಯಲ್ಲಿ ದೊರೆಯಬೇಕಾಗಿತ್ತು ಎಂದು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಕಲಾವಿದ ಶ್ಯಾಂ ಸುಂದರ್ ಮಾತನಾಡುತ್ತಾ,ಬಾಬು ಜಗಜೀ ವನ್ ರಾಮ್ ಅವರು ಡಾ.ಬಿ.ಆರ್. ಅಂಬೇಡ್ಕರ್ ರಂತೆ ಅಸ್ಪೃಶ್ಯತೆಯ ಕಹಿ ಘಟನೆಯ ವಿರುದ್ಧ ಪ್ರತಿಭಟಿಸಿ ದವರು.ಅಂತಹ ಮಹಾನ್ ವ್ಯಕ್ತಿಯ ಹೆಸರಿನ ಪ್ರತಿಷ್ಠಿತ ಪ್ರಶಸ್ತಿ ಕರಿಯವರಿಗೆ ದೊರೆತಿ ರುವುದು ಅವರ ಪ್ರತಿಭೆ ಕೌಶಲ್ಯಕ್ಕೆ ಸಂದ ಗೌರವ ಎಂದರು.
ಸಮಾರಂಭದಲ್ಲಿ ಕರಿಯ ಕೆ. (ಪ್ರಶಸ್ತಿ ಪುರಸ್ಕೃತರು) ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಾ ನಾನು ಮೂಡ ಬಿದ್ರೆಯ ಕೆಲ್ಲ ಪುತ್ತಿಗೆಯಲ್ಲಿ ಕೆಲವು ತಿಂಗಳು ಶಾಲೆಗೆ ಹೋಗಿದ್ದೇನೆ.ಬಳಿಕ ಶಾಲೆಗೆ ಹೋಗಿಲ್ಲ.1973 ಪಿಡಬ್ಲ್ಯೂಟಿ ಗ್ಯಾಂಗ್ ಮ್ಯಾನ್ ಆಗಿ ಸೇರಿದೆ.
ಅಲ್ಲಿ ಒಂದು ಬಾರಿ ನ್ಯಾಯಯುತ ಹೋರಾಟ ದಲ್ಲಿ ತೊಡಗಿಕೊಂಡ ಕಾರಣಕ್ಕಾಗಿ ನನ್ನನ್ನು ಗ್ಯಾಂಗ್ ಮನ್ ಕೆಲಸದಿಂದ ತೆಗೆದು ಹಾಕುವ ಪ್ರಯತ್ನ ನಡೆಯಿತು.ಆ ಸಂದರ್ಭದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ ಒಂದೂವರೆ ಗಂಟೆವರೆಗೆ ಒಬ್ಬನೆ ಇಂಜಿನಿಯರ್ ಅವರ ಮನೆಯ ಮುಂದೆ ಪ್ರತಿಭಟನೆ ಮಾಡಿದೆ. ಇಂಜಿನಿಯರ್ ಪ್ರತಿಭಟನೆ ಮಾಡಿದ್ದಕ್ಕಾಗಿ ನನ್ನನ್ನು ಕೆಲಸದಿಂದ ತೆಗೆದು ಕೋಪ ವ್ಯಕ್ತಪಡಿಸಿದರು. ಬಳಿಕ ಮಂಗಳೂರಿನಲ್ಲಿ ಹೊಟೇಲ್ ನಲ್ಲಿ ಗ್ಲಾಸ್ ತೊಳೆಯಲು ಸೇರಿದೆ.ಆದರೂ ನನ್ನ ಹೋರಾಟ ಮುಂದುವರಿ ದಿತ್ತು. ಬಳಿಕ 1981ರಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಪೌರ ಕಾರ್ಮಿಕನಾಗಿ ಸೇರಿದೆ. ನಂತರ ಪಾಲಿಕೆಯ ಲಾರಿಯಲ್ಲಿ ಕ್ಲೀನರ್ ಆಗಿ ಸೇರಿದೆ.ಈ ರೀತಿ ನನ್ನ ಬದುಕು ಸಾಗಿದೆ ನಾನು ಈಗ ಇರುವ ವಾಮಂಜೂರಿನಲ್ಲಿ ಮನೆ ಇಲ್ಲದವರಿಗೆ ಮನೆ ನಿವೇಶನಕ್ಕಾಗಿ ಈಗಲೂ ನನ್ನ ಹೋರಾಟ ಮುಂದುವರಿದಿದೆ.
ಈ ನಡುವೆ ನನಗೆ ಪ್ರಶಸ್ತಿ ಬಂದಿದೆ ಈ ಸಂದರ್ಭದಲ್ಲಿ ಎಲ್ಲರಿಗೂ ನನ್ನ ಕೃತಜ್ಞತೆ ತಿಳಿಸುತ್ತೇನೆ ಎಂದು ಕರಿಯ ತಮ್ಮ ಅನುಭವವನ್ನು ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಆದಿವಾಸಿಕ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯ ಶೇಖರ್ ಅವರು ಮಾತನಾಡುತ್ತಾ ಕರಿಯಣ್ಣನವರ ಪ್ರಾಮಾಣಿಕ ಕೆಲಸ ಹಾಗೂ ಸಂಘಟನೆಯ ಹೋರಾಟದ ಫಲವಾಗಿ ರಾಜ್ಯ ಸರಕಾರದ ಉನ್ನತ ಪ್ರಶಸ್ತಿ ದೊರೆತಿದೆ.ಅವರಿಗೆ ಸಂದ ಪ್ರಶಸ್ತಿಯಿಂದ ನಮಗೆ ಸಂತಸವಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಆದಿವಾಸಿಕ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡರಾದ ಕೃಷ್ಣ ಇನ್ನಾ ಮೊದಲಾದವರು ಉಪಸ್ಥಿತರಿದ್ದರು. ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.ರಶ್ಮಿ ವಂದಿಸಿದರು.







