ದ. ಕ. ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ, ಯೋಜನಾ ಪ್ರಾಧಿಕಾರಗಳ ಒಕ್ಕೂಟ ರಚನೆ
ಅಧ್ಯಕ್ಷರಾಗಿ ಸದಾಶಿವ ಉಳ್ಳಾಲ್, ಸಂಚಾಲಕರಾಗಿ ಕೆ.ಎಂ ಮುಸ್ತಫ ಸುಳ್ಯ, ದಿನಕರ್ ಹೇರೂರು ಆಯ್ಕೆ

ಮಂಗಳೂರು: ದ. ಕ. ಮತ್ತು ಉಡುಪಿ ಜಿಲ್ಲೆಗಳ 2 ನಗರಾಭಿವೃದ್ಧಿ ಮತ್ತು 6 ನಗರ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರುಗಳ ಸಭೆ ಮಂಗಳೂರು ಡಿಸಿಸಿ ಕಚೇರಿಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ವಹಿಸಿದ್ದರು. ಸೂಡ ಅಧ್ಯಕ್ಷ ಮುಸ್ತಫ ಸುಳ್ಯ ಸ್ವಾಗತಿಸಿ, ವಿಷಯ ಮಂಡಿಸಿದರು.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಇಲಾಖೆಯಿಂದ ಪ್ರಸ್ತುತ ಜಾರಿಯಲ್ಲಿ ಇರುವ ವಲಯ ನಿಯಮಾ ವಳಿಗಳು ತುಂಡು ಭೂಮಿ, ಅರಣ್ಯ ಬಫರ್, ಕಾನ, ಬಾಣೆ ಅಕ್ರಮ ಸಕ್ರಮ ಪ್ಲಾಟಿಂಗ್ ಸಮಸ್ಯೆ ಯಿಂದ ಕನ್ವರ್ಷನ್, ಏಕ ನಿವೇಶನ ವಿನ್ಯಾಸ, ಮಲ್ಟಿ ಸೈಟ್ ಲೇ ಔಟ್ ಗಳಿಗೆ ಕಾನೂನಿನ ತೊಡಕು ಉಂಟಾಗು ತ್ತಿದೆ. ಅಲ್ಲದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾರಿಗೆ ತಂದಿರುವ ನಿಯಮಾವಳಿಗಳನ್ನು ಸರಳೀಕರಣ ಗೊಳಿಸುವುದು ಮೊದಲಾದ ಬೇಡಿಕೆಗಳನ್ನು ಜಿಲ್ಲೆಯ ಜನಪ್ರತಿನಿದಿಗಳು, ನಾಯಕರು, ಸಚಿವರುಗಳ ಮೂಲಕ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡು ಕೊಳ್ಳುವುದೆಂದು ತೀರ್ಮಾನಿ ಸಲಾಯಿತು. ಈ ಬಗ್ಗೆ ಸಂಘಟಿತ ಪ್ರಯತ್ನ ನಡೆಸುವ ಉದ್ದೇಶದಿಂದ ಒಕ್ಕೂಟ ರಚಿಸಲಾಯಿತು.
ಅಧ್ಯಕ್ಷರಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಸಂಚಾಲಕರುಗಳನ್ನಾಗಿ ಸುಳ್ಯ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ, ಉಡುಪಿ ನಗರಾಭಿವೃದ್ಧಿ ಅಧ್ಯಕ್ಷ ದಿನಕರ್ ಹೇರೂರು ಅವರನ್ನು ಆಯ್ಕೆ ಮಾಡಲಾಯಿತು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್ ವಂದಿಸಿದರು. ಸಭೆಯಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮಳ ರಾಮಚಂದ್ರ, ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹರ್ಷ ವರ್ಧನ್ ಪಡಿವಾಳ್, ಉಭಯ ಜಿಲ್ಲೆಗಳ ಪ್ರಾಧಿಕಾರಗಳ ಸದಸ್ಯರುಗಳು ಈ ಸಂದರ್ಭ ಉಪಸ್ಥಿತರಿದ್ದರು.







