ಪ್ರತಿಭಾವಂತ ಮುಸ್ಲಿಂ ವಿದ್ಯಾರ್ಥಿಗಳಿಗೆ ಮೀಫ್ ಮೂಲಕ ಮೆಡಿಕಲ್ ಸೀಟ್

ಮಂಗಳೂರು, ಜೂ.17: ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿರುವ ಆರ್ಥಿಕವಾಗಿ ಹಿಂದುಳಿದ ಮುಸ್ಲಿಮ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೇರ್ಪಡೆಗೆ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ದ.ಕ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆ ಮೂಲಕ ಮಂಗಳೂರಿನ ಕೆಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಹಾಗೂ ಉದಾರ ದಾನಿಗಳು ಸೌಲಭ್ಯವನ್ನು ನೀಡಲು ಆಸಕ್ತಿ ವಹಿಸಿದ್ದಾರೆ.
*ಮೆಡಿಕಲ್ ಸೀಟುಗಳು: ಸರಕಾರಿ ಕೋಟಾದಲ್ಲಿ ಮೆಡಿಕಲ್ ಸೀಟು ಪಡೆಯುವ ಅರ್ಹ ವಿದ್ಯಾರ್ಥಿಗಳಿಗೆ ಅವರ ಸರಕಾರಿ ಶುಲ್ಕವನ್ನು ಭರಿಸಲಾಗುವುದು. ಇದರಲ್ಲಿ 2 ಸೀಟುಗಳು ಲಭ್ಯವಿರುತ್ತದೆ.
*ನೀಟ್ ಪುನರಾವರ್ತಿತ ವಿದ್ಯಾರ್ಥಿಗಳು: ಈ ವರ್ಷ ನಡೆದ ನೀಟ್ ಪರೀಕ್ಷೆಗಳಲ್ಲಿ ಅತೀ ಕಡಿಮೆ ಅಂತರದಿಂದ ಎಂಬಿಬಿಎಸ್ ಸೀಟು ಪಡೆಯಲು ಅವಕಾಶ ಕಳಕೊಂಡು, ಪಿಯುಸಿಯಲ್ಲಿ ಶೇ. 94ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಂಗಳೂರಿನ ಹಾಗೂ ಸುತ್ತ ಮುತ್ತಲ ವಿದ್ಯಾ ಸಂಸ್ಥೆಗಳಲ್ಲಿ ಒಂದು ವರ್ಷದ ಉಚಿತ ಪುನರಾವರ್ತಿತ ನೀಟ್ ತರಬೇತಿ - 40ಸೀಟುಗಳು ನೀಡಲಾಗುವುದು.
*ಇತರ ಕೋರ್ಸುಗಳು: ಸಿಇಟಿ, ನೀಟ್, ಜೆಇಇ, ಕ್ಯಾಟ್‌ಗೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೌಲಭ್ಯ.
ಈ ಕೋರ್ಸುಗಳಿಗೆ ಆಯ್ಕೆಗೊಂಡ ಅರ್ಹ ಬಡ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಅವರ ಸರಕಾರಿ ಶುಲ್ಕವನ್ನು ಭರಿಸಲು ಗರಿಷ್ಠ ತಲಾ 25,000 ವರೆಗೆ ಆರ್ಥಿಕ ಸಹಾಯ ನೀಡಲಾಗುವುದು - 20ಸೀಟುಗಳು ಲಭ್ಯ ಇರುತ್ತದೆ.
ಆಸಕ್ತ ವಿದ್ಯಾರ್ಥಿಗಳು 2025ರ ಜೂ.30 ಒಳಗಾಗಿ ಮೀಫ್ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಮೀಫ್ ಕಚೇರಿಯಲ್ಲಿ ಲಭ್ಯವಿರುವುದು. ಹೆಚ್ಚಿನ ಮಾಹಿತಿಗಾಗಿ ಮೀಫ್ ಕಚೇರಿಯನ್ನು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯ ಅವಧಿಯಲ್ಲಿ ಸಂಪರ್ಕಿಸಬಹುದು. ಕಚೇರಿ ಸಂಪರ್ಕ ಸಂಖ್ಯೆ 8792115666 ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







