ಬಂಟ್ವಾಳ: ಕಾರಿಗೆ ಗೂಡ್ಸ್ ಲಾರಿ ಢಿಕ್ಕಿ; ಚಾಲಕ ಸಹಿತ ಮೂವರಿಗೆ ಗಾಯ

ಬಂಟ್ವಾಳ : ಕಾರಿಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದು ಚಾಲಕ ಸಹಿತ ಮೂವರು ಗಾಯಗೊಂಡ ಘಟನೆ ಪಾಣೆಮಂಗಳೂರು ಹೆದ್ದಾರಿಯಲ್ಲಿ ಸಂಭವಿಸಿದೆ.
ಅಪಘಾತದಿಂದ ಕಾರಿನಲ್ಲಿದ್ದ ಚಾಲಕ ಸಹಿತ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಬಗ್ಗೆ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ನಿವಾಸಿ ಹರಿಪ್ರಸಾದ್ ಎಂಬವರು ಕಾರಿನಲ್ಲಿ ಇತರ ರೊಂದಿಗೆ ಮಂಗಳೂರು ಕಡೆ ಪ್ರಯಾಣಿಸುತ್ತಿದ್ದಾಗ ಪಾಣೆಮಂಗಳೂರು ರಾಣಾ ಮಾರ್ಬಲ್ ಎದುರುಗಡೆ ತಲುಪಿದಾಗ ಎದುರಿನಿಂದ ಬಂದ ಅಂದಯ್ಯ ಹಿರೆಮಠ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಗೂಡ್ಸ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





