ಗುರುಕಂಬಳ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

ಮಂಗಳೂರು, ಜೂ.19: ನಮ್ಮ ಆಸುಪಾಸಿನ ವಾತಾವರಣ ಹೇಗೆ ಇರಲಿ, ನಮ್ಮ ಪ್ರಾಮಾಣಿಕತೆ ಹಾಗೂ ನೈತಿಕತೆಯು ನಮ್ಮನ್ನು ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳಲು ಸಹಕಾರಿಯಾಗಲಿದೆ. ಸೋಲು-ಗೆಲುವು ಶಿಕ್ಷೆಯೂ ಅಲ್ಲ, ರಕ್ಷೆಯೂ ಅಲ್ಲ. ಎರಡೂ ಶ್ರೀರಕ್ಷೆ ಆಗಿದೆ ಎಂದು ಜಾಮಿಯಾ ಮಸೀದಿ ಅಸ್ರಾರುದ್ದೀನ್ ಕಂಬಲ್‌ನ ಅಧ್ಯಕ್ಷ ಫಯಾಝ್ ಅಹ್ಮದ್ ಪಟೇಲ್ ಹೇಳಿದರು.
ದ.ಕ.ಜಿಪಂ ಉರ್ದು ಹಿಪ್ರಾ ಶಾಲೆ ಗುರುಕಂಬಳದಲ್ಲಿ ನಡೆದ ಪೋಷಕರ ಸಭೆ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಖಿದ್ಮಾ ಫೌಂಡೇಶನ್ ಗ್ಲೋಬಲ್ ಅಧ್ಯಕ್ಷ ಸಿದ್ದೀಕ್ ಮಿರ್ಜಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಪುಷ್ಪಾವತಿ ಸ್ವಾಗತಿಸಿದರು. ಸೈಯದ್ ಅನ್ವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಹಮೀದ್ ಪಟೇಲ್, ನವೀದ್ ಅಹ್ಮದ್, ಅಬ್ದುಲ್ ಲತೀಫ್ ಬಜ್ಪೆ, ಸೈಯದ್ ಸಿದ್ದೀಕ್, ಜೈನಾಬಿ, ಶುಕೂರ್ ಹಮ್ಮಾಜಿ, ಮುಹಮ್ಮದ್ ಅಸ್ಲಾಂ, ಅಶ್ಪಾಕ್ ಬೋಳಾರ್, ಸುಬಾನ್ ಖಾನ್, ಸುಗೇರಾ ಹಮ್ರಾಝ್ ಉಪಸ್ಥಿತರಿದ್ದರು. ಸಹ ಶಿಕ್ಷಕಿಯರಾದ ನೇತ್ರಾ ಕಾರ್ಯಕ್ರಮ ಸಂಯೋಜಿಸಿದರು. ಭಾಗ್ಯ ಕಾರ್ಯಕ್ರಮ ನಿರೂಪಿಸಿದರು. ಲೀಡಾ ವಂದಿಸಿದರು.







