ರಾಜ್ಯಮಟ್ಟದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಅಕ್ಷಯ ಬಾಬ್ಲುಬೆಟ್ಟು ಆಯ್ಕೆ

ಮಂಗಳೂರು: ಕರ್ನಾಟಕ ಸರಕಾರ, ಆಯುಷ್ ಇಲಾಖೆ, 11ನೇ ಅಂತಾರಾಷ್ಟ್ರೀ ಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21ರಂದು ಬೆಂಗಳೂರು ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿರುವ' ಯೋಗ ಸಂಗಮ ಸರಕಾರಿ ಕಾರ್ಯಕ್ರಮ ದಲ್ಲಿ ಅಂತಾರಾಷ್ಟ್ರೀಯ ಯೋಗ ಪಟು ಅಕ್ಷಯ ಬಾಬ್ಲುಬೆಟ್ಟು ಆಯ್ಕೆಯಾಗಿದ್ದಾರೆ.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರು ಯು.ಟಿ. ಖಾದರ್ ರವರು ವಿಶೇಷ ಮುತು ವರ್ಜಿ ವಹಿಸಿ ವಿಶೇಷ ಆಹ್ವಾನ ನೀಡಿದ್ದಾರೆ. ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೇಕಲ್ಲಿನಲ್ಲಿ 5 ನೇ ತರಗತಿಯ ವಿದ್ಯಾರ್ಥಿನಿ.
ಏನೇಕಲ್ಲು (ಬಾಬ್ಲುಬೆಟ್ಟು ) ನಿವಾಸಿ ಮೋಹನ್ ಕುಮಾರ್ ಮತ್ತು ದಿವ್ಯ ಕುಮಾರಿ ರವರ ಪುತ್ರಿ. ನಿರಂತರ ಯೋಗ ಕೇಂದ್ರ ಏನೇಕಲ್ಲು ಇಲ್ಲಿ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಯೋಗ ಶಿಕ್ಷಣ ಪಡೆಯುತ್ತಿದ್ದಾರೆ. ಯೋಗಾಸನದಲ್ಲಿ 2 ವಿಶ್ವ ದಾಖಲೆ ಮತ್ತು 6 ಚಿನ್ನದ ಪದಕ, 1 ಬೆಳ್ಳಿ, 3 ಕಂಚಿನ ಪದಕ ಗಳಿಸಿರುತ್ತಾರೆ.
Next Story





