ಕಾಡಾನೆ ದಾಳಿ: ಅರಂತೋಡಿನಲ್ಲಿ ಕೃಷಿ ಹಾನಿ

ಸುಳ್ಯ: ಆರಂತೋಡು ಗ್ರಾಮದ ಕಿರ್ಲಾಯದಲ್ಲಿ ಗುರುವಾರ ರಾತ್ರಿ ಕೃಷಿಕರ ತೋಟಗಳಿಗೆ ನುಗ್ಗಿದ ಕಾಡಾನೆಗಳು ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಪಡಿಸಿದೆ.
ಕಿರ್ಲಾಯದ ಕಿಶೋರ್ ಕುಮಾರ್, ದಿನೇಶ್ ಹಾಗೂ ನಾಗಪ್ಪ ಗೌಡರ ತೋಟಕ್ಕೆ ಕಾಡನೆಗಳ ಹಿಂಡು ದಾಳಿ ನಡೆಸಿ ಅಪಾರ ಹಾನಿ ಉಂಟುಮಾಡಿದೆ. ಸುಮಾರು 80 ಕ್ಕೂ ಹೆಚ್ಚು ಬಾಳೆ ಗಿಡ, ಎರಡು ತೆಂಗಿನ ಮರ ಹಾಗೂ ದೀವಿ ಹಲಸು ಮರವನ್ನು ನಾಶಗೊಳಿಸಿದೆ. ಅಲ್ಲದೇ ತೋಟಕ್ಕೆ ನೀರು ಹಾಯಿಸಲು ಅಳವಡಿಸಿದ ಸ್ಪ್ರಿಂಕ್ಲರ್ ಪೈಪ್ ಲೈನ್‍ಗಳಿಗೆ ಹಾನಿ ಮಾಡಿದೆ. ಈ ಭಾಗದಲ್ಲಿ ಕಳೆದ ಎರಡು ವಾರಗಳಿಂದ ಕಾಡಾನೆಗಳು ನಿರಂತರವಾಗಿ ಕೃಷಿ ಹಾನಿ ಮಾಡುತ್ತಿದೆ ಎಂದು ತಿಳಿದುಬಂದಿದೆ.
Next Story





