ವಿಶೇಷ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು, ಜೂ.21: ಪ್ರಸಕ್ತ (2025-26ನೇ) ಸಾಲಿಗೆ ಸಮನ್ವಯ ಶಿಕ್ಷಣದ ಕಾರ್ಯತಂತ್ರದಡಿ ಜಿಲ್ಲೆಯಲ್ಲಿ ಖಾಲಿ ಇರುವ ಬಿಐಇಆರ್‌ಟಿ ಬಂಟ್ವಾಳ-2 (ಪ್ರೌಢ), ಬೆಳ್ತಂಗಡಿ-2 (ಪ್ರೌಢ), ಮಂಗಳೂರು ಉತ್ತರ-2 (ಪ್ರೌಢ), ಮಂಗಳೂರು ದಕ್ಷಿಣ-2 (ಪ್ರೌಢ), ಮೂಡುಬಿದಿರೆ -2 (ಪ್ರೌಢ), ಪುತ್ತೂರು-2 (ಪ್ರೌಢ) ಮತ್ತು ಸುಳ್ಯ-3 (ಪ್ರಾಥಮಿಕ-1 ಪ್ರೌಢ-2) ಪ್ರಾಥಮಿಕ-1, ಪ್ರೌಢ-14 ಹುದ್ದೆಗಳಿಗೆ ವಿಶೇಷ ಶಿಕ್ಷಕರನ್ನು ನೇರ ಗುತ್ತಿಗೆ ಮೂಲಕ ತಾತ್ಕಾಲಿಕವಾಗಿ 2026ರ ಮೇ 31ರವರೆಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
*ವಿಶೇಷ ಶಿಕ್ಷಕರು ಹೊಂದಿರಬೇಕಾದ ವಿದ್ಯಾರ್ಹತೆ: ಪೂರ್ವ ಪ್ರಾಥಮಿಕ ಹಾಗೂ 1ರಿಂದ 5ನೇ ತರಗತಿಗೆ ಆರ್‌ಸಿಐ ಅನುಮೋದಿತ ಸಂಸ್ಥೆುಂದ ವಿಶೇಷ ಶಿಕ್ಷಣದಲ್ಲಿ ಡಿಎಡ್ ಪದವಿ ಪಡೆದಿರಬೇಕು ಮತ್ತು ಆರ್‌ಸಿಐ ಅನುಮೋದಿತ ಸಂಸ್ಥೆಯಿಂದ ವಿಶೇಷ ಶಿಕ್ಷಣದಲ್ಲಿ ಡಿಎಡ್‌ಗೆ ಸಮಾನವಾದ ಡಿಎಲ್‌ಎಡ್ ಪದವಿ ಪಡೆದಿರಬೇಕು ಮತ್ತು ಅಂತರ್ಗತ ಶಿಕ್ಷಣದಲ್ಲಿ ಅಡ್ಡ ಅಂಗವೈಕಲ್ಯ ಪ್ರದೇಶದಲ್ಲಿ ಆರು ತಿಂಗಳ ಬೋಧನಾ ತರಬೇತಿಯನ್ನು ಪಡೆದಿರಬೇಕು.
6ರಿಂದ 8ನೇ ತರಗತಿ ಹಾಗೂ 9ರಿಂದ 12ನೇ ತರಗತಿಗೆ ಆರ್‌ಸಿಐ ಅನುಮೋದಿತ ಸಂಸ್ಥೆಯಿಂದ ಆರ್‌ಸಿಐ ಸಿಆರ್‌ಆರ್ ಸಂಖ್ಯೆಯೊಂದಿಗೆ ವಿಶೇಷ ಶಿಕ್ಷಣದಲ್ಲಿ ಬಿಎಡ್ ಅಥವಾ ಆರ್‌ಸಿಐ ಅನುಮೋದಿತ ಸಂಸ್ಥೆಯಿಂದ ವಿಶೇಷ ಶಿಕ್ಷಣದಲ್ಲಿ ಬಿಎಡ್‌ಗೆ ಸಮಾನವಾದ ಮಾನ್ಯತೆ ಪಡೆದ ಅರ್ಹತೆಯೊಂದಿಗೆ ವಿಶೇಷ ಶಿಕ್ಷಣದಲ್ಲಿ ಬಿಎಡ್ ಮತ್ತು ಆರ್‌ಸಿಐ ಸಿಆರ್‌ಆರ್ ಸಂಖ್ಯೆಯೊಂದಿಗೆ ಬಿಎಡ್ ಪದವಿ ಪಡೆದಿರಬೇಕು. ಅಂಗವಿಕಲತೆ ಸೇರಿದಂತೆ ಅಂತರ್ಗತ ಶಿಕ್ಷಣದಲ್ಲಿ ಅಂಗವೈಕಲ್ಯ ಪ್ರದೇಶವನ್ನು ಬೋಧಿಸುವ ಆರು ತಿಂಗಳ ತರಬೇತಿ ಪಡೆದಿರಬೇಕು.
ಸೂಕ್ತ ದಾಖಲೆಯೊಂದಿಗೆ ನಗರದ ದ.ಕ. ಜಿಪಂ ಕಚೇರಿ ಕಟ್ಟಡದಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಕಚೇರಿಗೆ ಜೂ.27ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ. 9480695431ನ್ನು ಸಂಪರ್ಕಿಸಬಹುದು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







