ದೇರಳಕಟ್ಟೆ: ಎಸ್ ಡಿಪಿಐ ಸಂಸ್ಥಾಪನಾ ದಿನಾಚರಣೆ

ಕೊಣಾಜೆ: ಎಸ್ ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ಎಸ್ ಡಿಪಿಐ ಪಕ್ಷದ 17ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ದೇರಳಕಟ್ಟೆ ಎಸ್ ಡಿಪಿಐ ಕಚೇರಿ ಮುಂಭಾಗದಲ್ಲಿ ನಡೆಯಿತು.
ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಎಸ್ ಡಿಪಿಐ ಪಕ್ಷದ 17ನೇ ಸಂಸ್ಥಾಪನಾ ಪ್ರಯುಕ್ತ ಧ್ವಜಾರೋಹಣ ಗೈದರು.
ಬಳಿಕ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು ದೇಶದಲ್ಲಿ ರಾಜಕೀಯ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಕ್ಷೇತ್ರದಿಂದ ಹಿಂದುಳಿದಂತಹ ಸಮುದಾಯಗಳನ್ನ ಸಮುದಾಯಗಳ ಕೈಯನ್ನ ಹಿಡಿದುಕೊಂಡು ನೀವು ಕೂಡ ಈ ರಾಜಕೀಯದ ಪಾಳಿದಾರರು ಅನ್ನುವಂತಹ ಪ್ರಜ್ಞೆಯನ್ನು ಮೂಡಿಸಿಕೊಂಡು ಕಳೆದ 16 ವರ್ಷಗಳಲ್ಲಿ ಎಸ್ ಡಿಪಿಐ ಪಕ್ಷ ಮುನ್ನುಗ್ಗುತ್ತಿದೆ. ದೇಶದಲ್ಲಿ ಭ್ರಷ್ಟಾಚಾರ ಶೋಷಣೆ ದೌರ್ಜನ್ಯ ಇದನ್ನ ಮಾತ್ರ ಮೈಗೂಡಿಸಿಕೊಂಡ ಪಕ್ಷಗಳಿಗಿಂತ ಪರ್ಯಾಯವಾಗಿ ಎಸ್ ಡಿಪಿಐ ಮುಂದುವರಿಯುತ್ತಿದೆ ಎಂದು ಹೇಳಿದರು.
ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಎಸ್ ಡಿ ಪಿಐ ಕ್ಷೇತ್ರಾಧ್ಯಕ್ಷ ಝಾಹಿದ್ ಮಲಾರ್, ಎಸ್ಡಿಪಿಐ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್, ಎಸ್ಡಿಪಿಐ ಜೊತೆ ಕಾರ್ಯದರ್ಶಿಗಳಾದ ಆರೀಫ್ ಬೋಳಿಯಾರ್, ಅಶ್ರಫ್ ಮಂಚಿ, ಎಸ್ಡಿಪಿಐ ಸಂಘಟನಾ ಕಾರ್ಯದರ್ಶಿ ಶಹೀದ್ ಕಿನ್ಯ, ಎಸ್ಡಿಪಿಐ ಕೋಶಾಧಿಕಾರಿ ಫಾರೂಕ್ ಝಲ್ ಝಲ್, ಎಸ್ಡಿಪಿಐ ಕ್ಷೇತ್ರ ಸಮಿತಿ ಸದಸ್ಯರಾದ ಆಸೀಫ್ ಕೇಸಿರೋಡ್, ಅಬ್ದುಲ್ ಲತೀಫ್ ಕಲ್ಲಾಪು, ಜುನೈದ್ ಆರ್. ಕೆ. ಸಿ, ಎಸ್ಡಿಪಿಐ ಬ್ಲಾಕ್, ನಗರ ಸಮಿತಿ, ಪಟ್ಟಣ ಪಂಚಾಯತ್ ಮಟ್ಟದ ನಾಯಕರು ಸೇರಿದಂತೆ ಹಲವು ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.







