ಪ್ರೊ ಬಿ. ಕೃಷ್ಣಪ್ಪ ಜನ್ಮದಿನಾಚರಣೆ

ಮಂಗಳೂರು, ಜೂ.22: ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ ಬಿ. ಕೃಷ್ಣಪ್ಪ ಅವರ 87ನೇ ಜನ್ಮದಿನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಸ್ವಾಭಿಮಾನಿ ಪ್ರೊ. ಕೃಷ್ಣಪ್ಪ ಬಣ ಕೆಂಜಾರು ಗ್ರಾಮ ಶಾಖೆಯ ಆಶ್ರಯದಲ್ಲಿ ಕೆಂಜಾರು ಬಿಲ್ಲವ ಸಮಾಜ ಸೇವಾ ಸಂಘ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ರಾಘವೇಂದ್ರ ಅವರು ಕೃಷ್ಣಪ್ಪ ಬಿ.ಕೆಯವರ ನೆನಪು ಶಾಶ್ವತ ಅವರು ಅಂದು ಗುಡಿಸಲಲ್ಲಿ ಹಚ್ಚಿದ ಹೋರಾಟದ ಆ ಹಣತೆ ಇಂದಿಗೂ ಬೆಳಗುತ್ತಿದೆ. ಮುಂದೆಯು ನೋಡಿಕೊಳ್ಳುವ ಅನಿವಾರ್ಯತೆ ಇದೆ.ದಲಿತರ ಬದುಕಿನ ಬದಲಾವಣೆಗೆ ಶ್ರಮಿಸಿದ ಹಲವಾರು ಹೋರಾಟಗಾರರಿದ್ದಾರೆ. ಅವರ ಬಗ್ಗೆ ನಾವು ತಿಳಿದುಕೊಳ್ಳಬೇಕು, ನಮ್ಮ ಮಕ್ಕಳಿಗೂ ತಿಳಿಸಬೇಕು ಎಂದರು.
ದ.ಕ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ಮಾತನಾಡಿ ಪ್ರೊ. ಕೃಷ್ಣಪ್ಪರವರು ಹಳ್ಳಿ ಹಳ್ಳಿಗೂ ಪರಿಚಿತರು. ಅವರ ಹೋರಾಟ, ಹಾದಿ ನಮಗೆ ಸ್ಪೂರ್ತಿ ಅವರನ್ನು ಮರೆತರೆ ನಾವು ಮುಂದೆ ಗುಲಾಮರಂತೆ ಬದುಕಬೇಕಾದ ಸ್ಥಿತಿ ಬಂದು ಒದಗಬಹುದು ಎಂದರು.
ರಘ ಕೆ ಎಕ್ಕಾರು ಅವರು ‘ದಲಿತ ಸಂಘಟನೆ ಎಂದರೆ ಕೋಮು ಸಂಘಟನೆ ಅಲ್ಲ ದಲಿತ ಸಂಘಟನೆ ಇರುವುದಕ್ಕೆ ನಾವು ಧೈರ್ಯದಿಂದ ಬದುಕು ಕಟ್ಟಿಕೊಂಡಿದ್ದೇವೆ.ಅದಕ್ಕೆ ಕಾರಣ ಪ್ರೊ.ಬಿ ಕೃಷ್ಣಪ್ಪ ಅವರಂತಹ ಸಾಮಾಜಿಕ ಚಿಂತನೆಕಾರರ ಪರಿಶ್ರಮದಿಂದ ಮಾತ್ರ ಸಾಧ್ಯವಾಗಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಲಿಂಗಪ್ಪ ಕುಂದರ್ ಮಾತಾಡಿ,ಕೃಪ್ಣಪ್ಪನವರು ಹುಟ್ಟು ಹಾಕಿದ ಸಂಘಟನೆಯಿಂದ ನಮ್ಮ ಗ್ರಾಮದ ದಲಿತರ ಬದುಕು ಬದಲಾವಣೆಯಾಗಿದೆ ಎಂದರು. ಕೃಷ್ಣ ಕೆ ಎಕ್ಕಾರು ಕಾರ್ಯಕ್ರಮ ಸ್ವಾಗತಿಸಿ, ವಂದಿಸಿದರು.







