ಫರಂಗಿಪೇಟೆ: ಎಸ್ಸೆಸ್ಸೆಫ್ ನಿಂದ ರಕ್ತದಾನ ಶಿಬಿರ

ಫರಂಗಿಪೇಟೆ, ಜೂ.22: ಎಸ್ಸೆಸ್ಸೆಫ್ ಫರಂಗಿಪೇಟೆ ಸೆಕ್ಟರ್ ವತಿಯಿಂದ ಎಸ್ಸೆಸ್ಸೆಫ್ ಬ್ಲಡ್ ಸೈಬೋ ಕರ್ನಾಟಕ ಇದರ 352ನೇ ರಕ್ತದಾನ ಶಿಬಿರವು ಫರಂಗಿಪೇಟೆ ಜಂಕ್ಷನ್ ನಲ್ಲಿ ರವಿವಾರ ನಡೆಯಿತು.
ಕೆಎಂಜೆ ಮಂಗಳೂರು ಝೋನ್ ಅಧ್ಯಕ್ಷ ವಿ.ಎ.ಮುಹಮ್ಮದ್ ಸಖಾಫಿ ವಳವೂರ್ ದುಆಗೈದರು, ಎಸ್ಸೆಸ್ಸೆಫ್ ಬ್ಲಡ್ ಸೈಬೋ ಕರ್ನಾಟಕ ಕನ್ವೀನರ್ ನವಾಝ್ ಸಖಾಫಿ ಅಡ್ಯಾರ್ ಪದವು ಶಿಬಿರ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ಫರಂಗಿಪೇಟೆ ಸೆಕ್ಟರ್ ಅಧ್ಯಕ್ಷ ಆಸಿಫ್ ಸಅದಿ ಅಡ್ಯಾರ್ ಪದವು ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಯೂನುಸ್ ತುಂಬೆ ಸ್ವಾಗತಿಸಿದರು. ಎಸ್.ವೈ.ಎಸ್. ಮಂಗಳೂರು ಝೋನ್ ಅಧ್ಯಕ್ಷ ಯಾಕೂಬ್ ಸಅದಿ ಸಂದೇಶ ನೀಡಿದರು.
ಎಸ್.ವೈ.ಎಸ್. ಕಣ್ಣೂರು ಸರ್ಕಲ್ ಅಧ್ಯಕ್ಷ ಸೆಯ್ಯದ್ ಇಸ್ಹಾಕ್ ತಂಙಳ್ ಅಡ್ಯಾರ್ ಕಣ್ಣೂರು, ಬಂಟ್ವಾಳ ಸ್ಟೇಷನ್ ಉಪ ನಿರೀಕ್ಷಕರು ಮಂಜುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮುಹಮ್ಮದ್ ಹಾಜಿ ಸಾಗರ್, ಕೆ.ಎಚ್.ಕೆ. ಕರೀಂ ಹಾಜಿ ಅಡ್ಯಾರ್, ವಕ್ಫ್ ಜಿಲ್ಲಾ ಉಪಾಧ್ಯಕ್ಷರು ಅಶ್ರಫ್ ಕಿನಾರ, ಡಾ.ಅಜಿತ್ ಕುಮಾರ್ ಫರಂಗಿಪೇಟೆ, ಎಸ್ಸೆಸ್ಸೆಫ್ ಮಂಗಳೂರು ಡಿವಿಷನ್ ಅಧ್ಯಕ್ಷ ಅಶ್ರಫ್ ಫಾಳಿಲಿ, ಅಮ್ಮೆಮಾರ್ ಮಸೀದಿ ಅಧ್ಯಕ್ಷ ಅಬೂ ಸ್ವಾಲಿಹ್ ಉಸ್ತಾದ್, ಅಬ್ದುರ್ರಹ್ಮಾನ್ ಹಾಜಿ ಕೊಪ್ಪಳ, ಸುಲೈಮಾನ್ ಉಸ್ತಾದ್ ಅಮ್ಮೆಮಾರ್, ಸಿದ್ದೀಕ್ ಹಾಜಿ ಅರ್ಕುಳ, ಎಸ್ಸೆಸ್ಸೆಫ್ ಫರಂಗಿಪೇಟೆ ಸೆಕ್ಟರ್ ಕೋಶಾಧಿಕಾರಿ ಉಮರುಲ್ ಫಾರೂಕ್ ಅಡ್ಯಾರ್ ಪದವು, ನಂ 1 ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಫಾರೂಕ್ ಸುಜೀರ್ ಮತ್ತಿತರು ಉಪಸ್ಥಿತರಿದ್ದರು.







